ತಾಳಿಕೋಟಿ:ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸಂಜಯಸಿಂಗ್ ರಜಪೂತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಕಾನಿಪ ತಾಲೂಕ ಸಂಘದ ನೂತನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಅವರ ಈ ಅವಿರೋಧ ಆಯ್ಕೆ ನಡೆದಿದೆ. ಪಟ್ಟಣದ ಉದಯೋನ್ಮುಖ ಪತ್ರಕರ್ತರಾದ ಸಂಜಯಸಿಂಗ್ ರಜಪೂತ ಅವರು ಕಳೆದ ಹತ್ತು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕ್ರಿಯಾಶೀಲತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಪ್ರಸಕ್ತ ಅವರು ಲೋಕದರ್ಶನ ಪ್ರಾದೇಶಿಕ ದಿನಪತ್ರಿಕೆಯ ತಾಲೂಕ ವರದಿಗಾರರಾಗಿದ್ದಾರೆ. ಅಭಿನಂದನೆ: ಪತ್ರಕರ್ತ ಸಂಜಯಸಿಂಗ್ ರಜಪೂತ ಇವರನ್ನು ತಾಳಿಕೋಟಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವದಕ್ಕೆ ಸ್ಥಳೀಯ ರಜಪೂತ ಸಮಾಜದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *