ನಗರದ ತಾಲೂಕು ಪಂಚಾಯಿತಿಯಲ್ಲಿ ಸಾಮೂಹಿಕ ಆಸ್ತಿಗಳ ಕುರಿತು ಅಂತರಾಷ್ಟ್ರ ಮಟ್ಟದ ಸಮ್ಮೇಳನ ಕಾರ್ಯಕ್ರಮ ಆನ್ ಲೈನ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಅಧ್ಯಕ್ಷತೆ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಹಾಗೂ ಸಹಾಯಕ ನಿರ್ದೇಶಕ ಯಂಕಪ್ಪ ಭಾಗವಹಿಸಿ ತಾಲೂಕಿನ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಬೇರ್ಪೋಟೆಕ್ನಿಷಿಯನ್ ಮತ್ತು ಗ್ರಾಮ ಕಾಯ್ಕ ಮಿತ್ರಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಅಂತರಾಷ್ಟ್ರೀಯ ಈ ಸಮ್ಮೇಳನದಲ್ಲಿ ಭಾರತ ದೇಶದ ಎಲ್ಲಾ ರಾಜ್ಯಗಳು ಹಾಗೂ ವಿದೇಶದ ಸಂಪನ್ಮೂಲ ವ್ಯಕ್ತಿಗಳು ಕೂಡ ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿಸೆಂಬರ್ 10 ರಿಂದ 12 ರವರಿಗೆ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯು ಮುಂದಾಳತ್ವದಲ್ಲಿ ತಾಲೂಕಿನ ಐ.ಎಸಿ ಸಂಯೋಜಕರಾದ ಥಾಮಸ್ ಕಾರ್ಯಕ್ರಮದ ಉಸ್ತುವಾರಿ ಮತ್ತು ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ಕರ್ನಾಟಕ ರಾಜ್ಯದ ಸರ್ಕಾರಿ ಸಾಮೂಹಿಕ ಆಸ್ತಿಗಳನ್ನ ಉಳಿಸುವಲ್ಲಿ ಮಹಿಳೆಯರು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಅಧ್ಯಕ್ಷರ ಪಾತ್ರದ ಕುರಿತು ಅಂತರಾಷ್ಟ್ರ ಮಟ್ಟದಲ್ಲಿ ಭಾರತ ದೇಶದ ಎಲ್ಲಾ ರಾಜ್ಯದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಭಾಗವಹಿಸಿ, ತಮ್ಮ ಅನಿಸಿಕೆ ಮತ್ತು ವಿಚಾರಗಳನ್ನು ಚರ್ಚಿಸಲಾಯಿತು. ಜೊತೆಗೆ ಆಯಾ ತಾಲೂಕಿನ ಗ್ರಾಮಗಳಲ್ಲಿ ಪರಿಸರ ಅಭಿವೃದ್ಧಿ ಮತ್ತು ಪರಿಸರವನ್ನು ಉಳಿಸುವಲ್ಲಿ ಅವರವರ ಕೊಡುಗೆ ಮತ್ತು ಪಾತ್ರಗಳು ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಪರಿಸರದ ಕೊಡುಗೆ ಕುರಿತು ಸವಿವರವಾಗಿ ಚರ್ಚಿಸಲಾಯಿತು.

