ಮಾನ್ವಿ : ಸರಕಾರಿ ಬಿ.ಇಡಿ ಮತ್ತು ಸರ್ಕಾರಿ
ಕಾನೂನು ಪದವಿ ಮಹಾವಿದ್ಯಾಲಯಗಳನ್ನು ಮಾನ್ವಿ ತಾಲೂಕಿನಲ್ಲಿ ಜಾರಿಗೊಳಿಸಲು
ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಮಾನ್ವಿ
ನಗರವು ಎಲ್ಲಾ ರಂಗಗಳಲ್ಲೂ ಮುಂದುವರೆ ದಿರುವ ತಾಲೂಕು ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಅಭಿ ವೃದ್ಧಿ ಹೊಂದಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ತಾಲೂಕಿಗೆ ಸರ್ಕಾರಿ ಬಿ.ಇಡಿ ಕಾಲೇಜು ಮತ್ತು ಸರ್ಕಾರಿ ಕಾನೂನು ಮಹಾವಿದ್ಯಾಲಯದ ಅವಶ್ಯ ಮತ್ತು ಈ ಭಾಗದ ಅಸಂಖ್ಯಾತ ವಿದ್ಯಾರ್ಥಿಗಳ ಬಹುದೊಡ್ಡ ಬೇಡಿಕೆಯಾಗಿದೆ. ಈ ಎರಡು ಕಾಲೇಜುಗಳನ್ನು ನಮ್ಮ ತಾಲೂಕಿಗೆ ಸರ್ಕಾರದಿಂದ ಮಂಜೂರು ಮಾಡಿಸಿದರೆ ವಿದ್ಯಾರ್ಥಿಗಳು ಬೇರೊಂದು ತಾಲೂಕು ಅಥವಾ ಜಿಲ್ಲೆಗಳಿಗೆ ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದಾಗಿ ನಮ್ಮ ತಾಲೂಕಿಗೆ ಈ ಎರಡು ಕಾಲೇಜುಗಳನ್ನು ಮಂಜೂರು ಮಾಡಿಸಲು ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ ಧ್ವನಿ ಎತ್ತಿ, ನಮ್ಮ ಭಾಗದ ಸಹಸ್ರ ಸಹಸ್ರ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಲು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
