ರಾಯಚೂರು: ಡಿಸೆಂಬರ್ 11 ನಗರದ ಟ್ರಾಫಿಕ್ ಪೋಲೀಸ್ ಠಾಣೆ ಪಿಎಸ್ಐ ಸಣ್ಣ ವೀರೇಶ್ ಅವರು ಸಾರ್ವಜನಿಕವಾಗಿ ಮಾಧ್ಯಮದವರೊಂದಿಗೆ ಮಾತನಾಡಿ ನಿತ್ಯವೂ ಹೆಲೈಟ್ ಬಗ್ಗೆ ಅದೆಷ್ಟೋ ಅವೆರ್ನೆಸ್ ಮೂಡಿಸಿದರೂ ಸಹಿತ ಜನ ಸಾಮಾನ್ಯರ ಗಮನಕ್ಕೆ ಹೆಲೈಟ್ ಧಾರಣೆಯ ಬಗ್ಗೆ ಅರಿವು ಮೂಡುತ್ತಿಲ್ಲ, ನಮ್ಮ ಪೋಲೀಸ್ ಸಿಬ್ಬಂಧಿಗಳು ನಿತ್ಯವೂ ಗಾಡಿಗಳಿಗೆ ದಂಡ ವಿಧಿಸಿದಾಗ ದಂಡ ಕಟ್ಟುತ್ತಾರೆ ಹೊರತು ಅದೇ ದಂಡದ ಹಣದಿಂದ ಹೆಲೈಟ್ ಖರೀದಿ ಮಾಡುತ್ತಿಲ್ಲವಾದುದು ದುರಾದೃಷ್ಟಕರವಾಗಿದೆ. ಪ್ರತೀ ದ್ವಿಚಕ್ರ ವಾಹನವನ್ನು ಒಂದಿಲ್ಲ ಒಂದು ಪರಿಶೀಲಿದಾಗ ಸಂಚಾರ ನಿಯಮದಲ್ಲಿ ತಪ್ಪು ಮಾಡಿ ದಂಡ ಕಟ್ಟುತ್ತಾ-ಪೋಲೀಸರೊಂದಿಗೆ ಸೌಜನ್ಯದಿಂದ ಮಾತನಾಡಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಹೆಲೈಟ್ ಧರಿಸಿ ವಾಹನ ಸಂಚಾರ ಮಾಡಿದರೆ ನಿಮಗೂ ಒಳ್ಳೇದು ನಿಮ್ಮ ಕುಟುಂಬಕ್ಕೂ ಒಳ್ಳೇದು. ಯಾಕೆಂದರೆ ನಿಮ್ಮನ್ನೇ ನಂಬಿಕೊಂಡುಒಂದು ಕುಟುಂಬವೇ ಬದುಕುತ್ತಿರುತ್ತದೆ. ನಿಮಗೇನಾದ್ರೂ ಅಪಘಾತವಾದರೆ ಆ ಕುಟುಂಬದ ಪರೀಸ್ಥಿತಿ ಹೇಗಾಗಬಹುದು. ಅದಕ್ಕಾಗಿ ಸಾರ್ವಜನಿಮರು ತಮ್ಮ ಅಮೂಲ್ಯವಾದ ಜೀವನವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದಕ್ಕಾಗಿ ಪೋಲೀಸ್ ಇಲಾಖೆಯುದಿನದ ಇಪ್ಪತ್ನಾಲ್ಕು ಗಂಟೆ ಜನರಿಗಾಗಿ ಸೇವೆಸಲ್ಲಿಸುತ್ತಿದೆ, ಆದಕಾರಣ ಸರ್ವರೂ ಹೆಲ್ಮೆಟ್ ಧರಿಸಿ ನೀವು ಹಾಗೂ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಹಾಗು ಸಂಚಾರ ನಿಯಮಗಳನ್ನು ದಯವಿಟ್ಟು ಪಾಲಿಸಿ ಎಂದು ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ಕರೆ ನೀಡಿದ್ದಾರೆ.

