ಸಹಕರಿಸಿ- ತಾಪಂ ಇಒ ಅಮರೇಶ ಯಾದವ ಮಹತ್ವದ್ದಾಗಿದೆ ಟ್ಯಾಕ್ಸ್ ಪಾವತಿಸಿ ಅಭಿವೃದ್ಧಿಗೆ ಸಹಕರಿಸಿ- ತಾಪಂ ಇಒ ಅಮರೇಶ ಯಾದವಮಸ್ಕಿ : ವಿಕೇಂದ್ರಿಕೃತ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮಹತ್ವದ್ದಾಗಿದೆ ಆದ್ದರಿಂದ ಪ್ರತಿಯೊಬ್ಬರು ತೆರಿಗೆ ಪಾವತಿಸುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಸಹಕರಿಸಬೇಕು ಎಂದು ಮಸ್ಕಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಸಲಹೆ ನೀಡಿದರು.
ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು
ವಿಕೇಂದ್ರಿಕೃತ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮಹತ್ವದ್ದಾಗಿದೆ. ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳು, ಅರಿವು ಕೇಂದ್ರಗಳ ನಿರ್ವಹಣೆ, ಸಮುದಾಯದ ಆರೋಗ್ಯ ಕಾಪಾಡಲು ಕೈಗೊಳ್ಳುವ ಸ್ವಚ್ಛತಾ ಕಾರ್ಯಗಳು ಸೇರಿ ಗ್ರಾಮೀಣ ಪ್ರದೇಶದ ಜನರು ಒಂದಲ್ಲ ಒಂದು ಕಾರ್ಯಕ್ಕೆ ಗ್ರಾಮ ಪಂಚಾಯತಿಗಳನ್ನು ಆಶ್ರಯಿಸುತ್ತಾರೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲಗಳ ಬಳಕೆ ಮೂಲಕ ಸದೃಢವಾಗಿ ಕಾರ್ಯನಿರ್ವಹಿಸುವಂತಾಗಲು ಸ್ಥಳೀಯರ ಸಹಕಾರ ಅಗತ್ಯ. ಹೀಗಾಗಿ, ರಾಯಚೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಪ್ರತಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನ ಏರ್ಪಡಿಸಲಾಗುವುದು. ತಾಲೂಕಿಗೆ ನಿಗದಿಗೊಳಿಸಿದ ಒಂದು ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗುವುದು. ತೆರಿಗೆ ಪಾವತಿಸುವವರಿಗೆ ಗ್ರಾಪಂಯಿಂದ ಡಿಜಿಟಲ್ ರಸೀದಿ ವಿತರಿಸುತ್ತಿದ್ದು, ಆಸ್ತಿಗೆ ಸಂಬಂಧಿಸಿದಂತೆ ಮುಂದೆ ಎದುರಾಗಬಹುದಾದ ತಕಾರರುಗಳಿಗೆ ಸೂಕ್ತ ದಾಖಲೆಯಾಗಲಿದೆ. ಹೀಗಾಗಿ ಪ್ರತಿಯೊಬ್ಬರು ತೆರಿಗೆ ಪಾವತಿಸಿ, ಸರ್ಕಾರದ ಆಶಯ ಈಡೇರಿಸಬೇಕು ಎಂದರು. ತದ ನಂತರ ಅಮೀನಗಡ, ವಟಗಲ್, ಹಾಲಾಪುರ, ತೋರಣದಿನ್ನಿ, ಹಿರೇದಿನ್ನಿ, ಮಲ್ಲದಗುಡ್ಡ ಗ್ರಾಪಂಗೆ ಭೇಟಿ ನೀಡಿ, ತೆರಿಗೆ ವಸೂಲಾತಿ ಅಭಿಯಾನವನ್ನು ಖುದ್ದು ಪರಿಶೀಲಿಸಿದರು.
ಸಹಾಯಕ ನಿರ್ದೇಶಕರಾದ (ಪಂ.ರಾ) ಸೋಮನಗೌಡ ಪಾಟೀಲ್ ಸಂತೆಕಲ್ಲೂರು, ಅಂಕುಶದೊಡ್ಡಿ, ಅಡವಿಬಾವಿ (ಮಸ್ಕಿ), ಮಾರಲದಿನ್ನಿ, ಮೆದಕಿನಾಳ, ಕನ್ನಾಳ, ಮಟ್ಟೂರು, ತಲೇಖಾನ್, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಶಿವಾನಂದರಡ್ಡಿ ಕೊಳಬಾಳ, ಬಪ್ಪೂರು, ಗುಂಡ, ಗುಡದೂರು, ಉದ್ಬಾಳ, ಗೌಡನಬಾವಿ ಗ್ರಾಪಂಗೆ ತೆರಿಗೆ ವಸೂಲಾತಿ ಅಭಿಯಾನದ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು, ಗ್ರಾಪಂ ಸಿಬ್ಬಂದಿ ಇದ್ದರು.
ಫೋಟೋ ಶೀರ್ಷಿಕೆ

Leave a Reply

Your email address will not be published. Required fields are marked *