ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿದ ಪ್ರಯುಕ್ತ ಸಮೀಪದ ಉಟಗನೂರು ಮತ್ತು ಧೋತರಬಂಡಿ ಗ್ರಾಮಸ್ಥರ ನಡುವೆ ಪರಸ್ಪರ ವಾಗ್ವಾದ ಉಂಟಾಗಿದ್ದು ಸ್ಥಳಕ್ಕೆ ಮಾನ್ವಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಅವರು ಭೇಟಿ ನೀಡಿ ಉಬಯ ಗ್ರಾಮಗಳ ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಿನ್ನೆ ನೆಡೆದಿದೆ.

ಭಾನುವಾರ ಮೃತರಾದ ಧೋತರಬಂಡಿ ಗ್ರಾಮದ ರಾಮಾಂಜನೆಯ ಅವರ ಅಂತ್ಯ ಸಂಸ್ಕಾರವನ್ನು ಉಟಗನೂರು ಸರ್ಕಾರಿ ಪ್ರೌಢ ಶಾಲೆಯ ಹತ್ತಿರ ಸ್ಮಶಾನ ಜಾಗದಲ್ಲಿ ಮಾಡಲು ಗ್ರಾಮಸ್ಥರು ತಯಾರಿ ನಡೆಸಿದ್ದರು ಅದಕ್ಕೆ ವಿರೋಧ ವ್ಯಕ್ತಪಡಿಸಿದ ಉಟಗನೂರು ಗ್ರಾಮಸ್ಥರು ಶಾಲೆಯ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನಡೆಸದಂತೆ ಅಡ್ಡಿ ಪಡಿಸಿದ್ದಾರೆ, ಹಿಗಾಗಿ ಎರಡೂ ಗ್ರಾಮಗಳ ಗ್ರಾಮಸ್ಥರ ನಡುವೆ ಪರಸ್ಪರ ವಾಗ್ವಾದ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತೆರಳುವಷ್ಟರಲ್ಲಿ ಕವಿತಾಳ ಠಾಣೆಯ ಪಿಎಸ್‌ಐ ಗುರುಚಂದ್ರ ಯಾದವ್ ಮತ್ತು ಮಾನ್ವಿ ತಹಸೀಲ್ದಾರ್ ಭೀಮರಾಯ ರಾಮಸಸಮುದ್ರ ಅವರು ಗ್ರಾಮಸ್ಥರೊಂದಿಗೆ ಚರ್ಚಿಸಿ ಅಂತ್ಯ ಸಂಸ್ಕಾರ ಮಾಡಲು ಅನುವು ಮಾಡಿಕೊಟ್ಟರು.

`ಶಾಲೆ ಪಕ್ಕದಲ್ಲಿ ಸರ್ವೇ ನಂಬರ್ ಜಮೀನಿನಲ್ಲಿ ಸ್ಮಶಾನಕ್ಕೆ ಎರಡು ಎಕರೆ ಜಮೀನು ನೀಡಲಾಗಿದ್ದು, ಆದರೆ ಈ ಸರ್ವೇ ನಂಬರ್‌ನಲ್ಲಿ ಸ್ಮಶಾನಕ್ಕೆ ಸೂಕ್ತ ಸ್ಥಳ ಗುರುತು ಮಾಡಿಲ್ಲ, ಹಿಗಾಗಿ ಗೊಂದಲ ಉಂಟಾಗಿತ್ತು, ಶಾಲೆಯ ಜಾಗದ ಕುರಿತು ಸರ್ವೇ ನಡೆಸಿ ಹದ್ದಿಬಸ್ತು ಮಾಡುವುದು ಮತ್ತು ನಕ್ಷೆ ಪ್ರಕಾರ ಸ್ಮಶಾನಕ್ಕೆ ಸೂಕ್ತ ಸ್ಥಳ ಗುರುತಿಸಲಾಗುವುದು’ ಎಂದು
ತಹಸೀಲ್ದಾರರು ತಿಳಿಸಿದರು.
ಸ್ಥಳದಲ್ಲಿ ಎಎಸ್‌ಐಗಳಾದ ಜಾಫರ್‌ಸಾಬ್, ಹೇಮಂತ್, ಸಿಬ್ಬಂದಿ ಮಲ್ಲಿಕಾರ್ಜುನ ನೀರಮಾನ್ವಿ ಮತ್ತು ಕಂದಾಯ ನಿರೀಕ್ಷಕ ಸತೀಶ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *