ಸಿಂಧನೂರು ತಾಲೂಕಿನ ಸ.ಪ್ರಥಮ ದರ್ಜೆ ಮಹಿಳಾ ಕಾಲೇಜು ಸಿಂಧನೂರು ನಲ್ಲಿ ದಿನಾಂಕ :17 ನವೆಂಬರ್ ರಂದು ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು ಉದ್ಘಾಟಕರಾಗಿ ನಮ್ಮ ಸಿಂಧನೂರು ತಾಲೂಕಿನ ಶಾಸಕರಾದ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸನ್ಮಾನ್ಯ ಶ್ರೀ ಹಂಪನಗೌಡ ಬಾದರ್ಲಿ ಹಾಗೂ ಸನ್ಮಾನ್ಯ ಶ್ರೀ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಸಹ ಅಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಇವರ ಸಹೋದರರಾದ ಶ್ರೀಸೋಮನಗೌಡ ಬಾದರ್ಲಿ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಂತಪ್ಪ ಕೊಡಗಲಿ, ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಿಂಧನೂರು ಇವರು ವಹಿಸಿದ್ದರು ಹಾಗೂ ವಿಶೇಷ ಉಪನ್ಯಾಸಕರಾಗಿ ಶ್ರೀ ಬಸವರಾಜ ತಡಕಲ್, ಹಿರಿಯ ಪ್ರಾಧ್ಯಾಪಕರು ದೇವನಾಂ ಪ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಬೀರಪ್ಪ ಶಂಭೋಜಿ, ಸಾಹಿತಿಗಳು ಸಿಂಧನೂರು ಇವರು ವಹಿಸಿದ್ದರು ಹಾಗೂ ಕಾಲೇಜಿನಿಂದ ವರ್ಗಾವಣೆ ಗೊಂಡ ಡಾ.ಲಕ್ಷ್ಮಿದೇವಿ,ನೀಲಾಂಬಿಕಾ ಪ್ರಥಮ ದರ್ಜೆ ಸಹಾಯಕರು ಹಾಗೂ ಮೌನೇಶ್ ಅಟೆಂಡರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುದಗಲ್ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಮುದುಕಪ್ಪ ಸರ್ ಅವರು ನಿರ್ವಹಿಸಿದರು ಹಾಗು ಡಾ.ರೇಣುಕಾ ಎಂ ರೆಡ್ಡಿ ಸಂಯೋಜಕರು, ಮಹಿಳಾ ಸಬಲೀಕರಣ ಕೋಶ, ಸ.ಪ್ರ.ಮ.ಕಾ.ಸಿಂಧನೂರು ಶ್ರೀ ಶಂಕರಪ್ಪ, ಕನ್ನಡ ಉಪನ್ಯಾಸಕರು,ಪಂಪಾಪತಿ ಸಜ್ಜನ್ ಬಳಗಾನೂರು ಉಪನ್ಯಾಸಕರು ಹಾಗೂ ಕುಮಾರಿ ಸುಧಾ ವಿದ್ಯಾರ್ಥಿನಿ ಬಿ.ಎ.ಪ್ರಥಮ ವರ್ಷ, ಅಧ್ಯಕ್ಷರು, ಸಾಂಸ್ಕೃತಿಕ ಸಂಘ ಹಾಗೂ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ಸಮಸ್ತ ವಿದ್ಯಾರ್ಥಿ ವೃಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *