ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಒಂದು ದಿನದ ಯುವ ರೆಡ್ ಕ್ರಾಸ್ ಕಾರ್ಯಾಗಾರ

ರಾಯಚೂರು, ಡಿ.10: ಮಾನವಿಯ ತತ್ವಗಳನ್ನು ಎತ್ತಿ ಹಿಡಿಯಲು ಯುವಜನರನ್ನು ಪ್ರೇರೆಪಿಸಲು ಮತ್ತು ಸಬಲೀಕರಣಗೊಳಿಸಲು ನೆರವಾಗುತ್ತಿರುವ ಮತ್ತು ನಿಸ್ವಾರ್ಥವಾಗಿ ಸಲ್ಲಿಸುತ್ತಿರುವ ಯುವ ರೆಡ್‌ ಕ್ರಾಸ್ ಸಂಸ್ಥೆಯ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಯಚೂರು ಸಹಯೋಗದಲ್ಲಿ ವಿವಿ ಸಭಾಂಗಣದಲ್ಲಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಹಾಗೂ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗಾಗಿ ಹಮ್ಮಿಕೊಂಡ ಒಂದು ದಿನದ ಯುವ ರೆಡ್ ಕ್ರಾಸ್ ಕಾರ್ಯಾಗಾರ ವನ್ನು ಯುವ ರೆಡ್‌ ಕ್ರಾಸ್ ಸಂಸ್ಥೆ ಸಂಸ್ಥಾಪಕ ಜೀನ್ ಹೆನ್ರಿ ಡುನಾಂಟ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಮಾತನಾಡಿದ ಅವರು, ಯುವಜನರಲ್ಲಿ ಸ್ವಯಂ ಸೇವಾ ಮನೋಭಾವ, ಆರೋಗ್ಯ ಜಾಗೃತಿ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಬೆಳೆಸುವ ಗುರಿಯನ್ನು ವೈ.ಆರ್‌.ಸಿ. ಹೊಂದಿದ್ದು, ಬಹುತೇಕವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಆಶ್ರಯ ತಾಣವಾಗಿದೆ ಹಾಗೂ ವಿದ್ಯಾರ್ಥಿಗಳನ್ನು ಸಮಾಜದ ಕಾಲಜಿವುಳ್ಳ ನಾಗರಿಕರನ್ನಾಗಿ ರೂಪಿಸಲು ಅವರಿಗೆ ಪ್ರಥಮ ಚಿಕಿತ್ಸೆ, ಆರೋಗ್ಯ, ನೈರ್ಮಲ್ಯ ಮತ್ತು ವಿಪತ್ತು ನಿರ್ವಹಣೆಯಲ್ಲಿ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶುಭಾಶಯ ಹೇಳುತ್ತಾ ಅಧ್ಯಕ್ಷೀಯ ನುಡಿಗಳನ್ನಾಡಿದರು.

‘ಯುತ್ ರೆಡ್ ಕ್ರಾಸ್ ಸ್ವಯಂಸೇವೆ, ಏಕತೆ ಮತ್ತು ವಿಶ್ವವ್ಯಾಪಕತೆ ಮೈಗೂಡಿಸುವ ಗುರಿ ಹೊಂದಿದೆ. ವಿದ್ಯಾರ್ಥಿ ಯುವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಮತ್ತು ಯುತ್ ರೆಡ್ ಕ್ರಾಸ್‌ನ ತತ್ವಗಳನ್ನು ಕಾರ್ಯರೂಪಕ್ಕಿಳಿಸುವ ಉದ್ದೇಶದಿಂದ ಈ ಸಂಸ್ಥೆ ಸಂಘಟಿಸಲಾಗಿ ಯುವ ಜನರಲ್ಲಿ ಆದರ್ಶ ಮನೋಭಾವವನ್ನು ಮೂಡಿಸುವ ಹಾಗೂ ನಾಗರೀಕ ಹೊಣೆಗಾರಿಕೆಯನ್ನು ಅರ್ಥ ಮಾಡಿಸಿ ಕೊಡುವ ಕಾರ್ಯವನ್ನು ಯುತ್ ರೆಡ್‌ ಕ್ರಾಸ್ ಮಾಡುತ್ತಿದೆ ಎಂದು ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆ ಬೆಂಗಳೂರಿನ ನಿರ್ದೇಶಕ ವಿಜಯಕುಮಾರ ಪಾಟೀಲ್ ಶಾವಂತಗೇರ ಅವರು ತಮ್ಮ ಉದ್ಘಾಟಕ ನುಡಿಗಳಲ್ಲಿ ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆ ಬೆಂಗಳೂರಿನ ಪ್ರಧಾನ ಉಮಾಕಾಂತ, ಕಾರ್ಯಗಾರದ ಕಾರ್ಯದರ್ಶಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆ ಬೆಂಗಳೂರಿನ ಸಂಯೋಜಕ ಆನಂದ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ವಿ.ವಿ ಕುಲಸಚಿವ ಡಾ.ಎ.ಚನ್ನಪ್ಪ, ಉಪ ಕುಲಸಚಿವ ಡಾ.ಕೆ. ವೆಂಕಟೇಶ, ರೆಡ್‌ಕ್ರಾಸ್‌ನ ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ನೋಡಲ್ ಅಧಿಕಾರ ಡಾ.ಎಂ. ರವಿ, ಪದಾಧಿಕಾರಿಗಳಾದ ಶೇಖ್ ಮೆಹಬೂಬ್, ಜಿ.ಎಸ್ ಹಿರೇಮಠ, ಮಹಿಬೂಬ್ ಮದ್ಲಾಪುರ, ಬ್ಲಡ್ ಬ್ಯಾಂಕ್ ನ ಅಮರೇಶ್, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಎನ್ಎಸ್ ಎಸ್ ಸಂಯೋಜನಾಧಿಕಾರಿ ಡಾ. ಜಿ.ಎಸ್ .ಬಿರಾದಾರ್, ಡೀನರು ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಭಾಸ್ಕರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಯುತ್ ರೆಡ್ ಕ್ರಾಸ್ ಸಂಯೋಜನಾಧಿಕಾರಿಗಳು, ಪದಾಧಿ ಕಾರಿಗಳು ಹಾಗೂ ಸದಸ್ಯರು ಹಾಗೂ ವಾಲ್ಮೀಕಿ ವಿವಿಯ ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *