ಸಿಂಧನೂರು : ಶನಿವಾರ ಡಿ 13 ರಂದು ಹಳೇ ಬಜಾರ, ವಾರ್ಡ್ ನಂ. 6 ಕಾಟಿಬೇಸ್ ಸಿಂಧನೂರು ಮಸ್ಟಿದ್-ಏ-ಹುದಾ, ಪಟೇಲವಾಡಿ ಸಿಂಧನೂರ ನಲ್ಲಿ ಅನುಗ್ರಹ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು .. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜ| ಮುಹಮ್ಮದ್ ಯೂಸೂಫ್ ಕನ್ನಿ
ರಾಜ್ಯ ಕಾರ್ಯದರ್ಶಿಗಳು ಜ.ಇ.ಹಿಂದ್ ಕರ್ನಾಟಕ ಇವರು ನೆರವೇರಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಜ|| ಹುಸೇನಸಾಬ ಅಧ್ಯಕ್ಷರು ಅನುಗ್ರಹ ಸೌ.ಸ.ಸಂ.ನಿ, ಸಿಂಧನೂರು ಇವರು ವಹಿಸಲಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಶ್ರೀ ಹಂಪನಗೌಡ ಬಾದರ್ಲಿ ಮಾನ್ಯ ಶಾಸಕರು ವಿಧಾನಸಭೆ ಸಿಂಧನೂರು
,ಶ್ರೀ ಬಸನಗೌಡ ಬಾದರ್ಲಿ ಮಾನ್ಯ ಶಾಸಕರು ವಿಧಾನ ಪರಿಷತ್ ಸಿಂಧನೂರು,ಶ್ರೀ ವೆಂಕಟರಾವ್ ನಾಡಗೌಡ ಮಾನ್ಯ ಮಾಜಿ ಸಚಿವರು ಸಿಂಧನೂರು,ಶ್ರೀ ಕೆ. ಕರಿಯಪ್ಪ ಬಿಜೆಪಿ ಮುಖಂಡರು ಸಿಂಧನೂರು
,ಜ|| ಉಸಾಮಾ ಖಾನ್ ಸಿ.ಇ.ಓ ಮೈಕ್ರೋ ಫೈನಾನ್ಸ್ ಸಹುಲತ್ ಸೊಸೈಟೀಸ್ ನವದೆಹಲಿ,ಶ್ರೀ ಎಂ. ದೊಡ್ಡಬಸವರಾಜ ಜಿಲ್ಲಾಧ್ಯಕ್ಷರು ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ, ರಾಯಚೂರು, ಜ|| ಬಾಬರ ಪಾಷ ವಕೀಲರು ಸಿಂಧನೂರು, ಜ|| ಖಾಜಿ ಜಿಲಾನಿ ಪಾಷ ಅಧ್ಯಕ್ಷರು ಮಿಲಾಪ್ ಶಾದಿ ಮಹಲ್ ಸಿಂಧನೂರು, ಶ್ರೀ ನಟರಾಜ ಸೌಹಾರ್ದ ಅಭಿವೃದ್ಧಿ ಅಧಿಕಾರಿಗಳು ರಾಯಚೂರು ಜಿಲ್ಲೆ ಆಗಮಿಸಲಿದ್ದು ಪ್ರತಿಯೊಬ್ಬರು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ

 

Leave a Reply

Your email address will not be published. Required fields are marked *