ಸಿಂಧನೂರು: ರಾಜ್ಯ ವಕೀಲರ ಪರಿಷತ್ ಚುನಾವಣೆಯ ತಮಗೆ ಬೆಂಬಲ ನೀಡುವ ಮೂಲಕ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ತಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕೆಂದು ಸೇವಾಕಾಂಕ್ಷಿ ಜಿ.ಎಸ್. ವೀರಭದ್ರಪ್ಪ ವಕೀಲರು ಮನವಿ ಮಾಡಿದರು.

ಕನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ ಮುಂಬರುವ ದಿನಗಳಲ್ಲಿ ನಡೆಯಲಿದ್ದು, ವಕೀಲರ ಪರಿಷತ್ ಸ್ಥಾನಕ್ಕೆ ಅಭ್ಯರ್ತಿಯಾಗಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು, ನಿಮ್ಮೇಲ್ಲರ ಬೆಂಬಲ ಅಮೂಲ್ಯ ಆರ್ಶೀವಾದ ನೀಡಬೇಕೆಂದು ಮನವಿ ಮಾಡಿಕೊಳ್ಳಲು ಸಿಂಧನೂರು ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರೊಂದಿಗೆ ಸಭೆ ನಡೆಸಿದರು.

ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಲಿಸುವಂತೆ ಕೋರಿದರು. ವೇದಿಕೆ ಮೇಲೆ ಸಂಘದ ಅಧ್ಯಕ್ಷರಾದ ಭೀಮನಗೌಡ ವಕೀಲರು, ಹಿರಯ ವಕೀಲರಾದ ಶಶಿಧರಗೌಡ ಕಲ್ಲೂರು, ಎಂ.ಅಮರೇಗೌಡ, ನಾಗರಾಜ ಮಸ್ಕಿ, ಜಿ.ಎಸ್.ಆರ್.ಕೆ ರೆಡ್ಡಿ, ಲಲಿತಾ ಚಿಲ್ಲಾ, ಇದ್ದರು. ಕಾರ್ಯಕ್ರಮದಲ್ಲಿ ಸಿಂಧನೂರಿನ ಹಿರಿಯ, ಕಿರಿಯ ಮತ್ತು ಮಹಿಳಾ ವಕೀಲರು ಕೂಡ ತಮ್ಮ ಬೆಂಬಲ ಸೂಚಿಸಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *