ಮಾನ್ವಿ:ಪಟ್ಟಣದ ಗ್ಯಾಲಾಕ್ಸಿ ಮೀಟಿಂಗ್ ಹಾಲ್ ಪಿ,ಹೆಚ್ ,ಕಾಲೇನಿಯಲ್ಲಿ ಸುವರ್ಣಗಿರಿ ಪ್ರಕಾಶನ ಮನ್ವಿ ರವರ ಪ್ರಕಾಶನದಲ್ಲಿ ಡಾ.ಚಂದ್ರಶೇಖರ ಸುವರ್ಣಗಿರಿ ಮಠ ರವರು ರಚಿಸಿದ ಆಧುನಿಕ ವಚನಗಳ ಸಂಕಲನ ನುಡಿ ನೈವೇದ್ಯ ಕೃತಿಯನ್ನು ಡಿ.14 ರಂದು ಬೆ.10ಕ್ಕೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮಹಾಂತೇಶ ಮಸ್ಕಿ ಲೋಕಾರ್ಪಣೆ ಗೊಳಿಸಲಿದ್ದಾರೆ .ದಿವ್ಯಸಾನಿಧ್ಯವನ್ನು ಕಲ್ಮಠದ ಶ್ರೀ ವಿರೂಪಾಕ್ಷಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಸದಾಶಿವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ವಹಿಸಲಿದ್ದಾರೆ. ಕೃತಿಯ ಕುರಿತು ಪರಿಚಾಯವನ್ನು ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಮಾಡಲಿದ್ದಾರೆ. ಡಾ.ಶವಶರಣಪ್ಪ ಇತ್ಲಿ, ಗಿರೆಯ್ಯಪಾಟೀಲ್ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ತಾಯಪ್ಪ ಬಿ.ಹೋಸೂರು, ತಾ.ಅಧ್ಯಕ್ಷರಾದ ಶರಣಬಸವ ನೀರಾಮಾನ್ವಿ, ಕೃತಿಯಲೇಖಕರಾದ ಡಾ.ಚಂದ್ರಶೇಖರ ಸುವರ್ಣಗಿರಿ ಮಠ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದುಸುವರ್ಣಗಿರಿ ಪ್ರಕಾಶನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *