ಹಮಾಲಿ ಕಾರ್ಮಿಕರ ಪ್ರಮುಖ ಏಳು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬುಧವಾರ ಸಂಘಟನೆ ವತಿಯಿಂದ ಮುಖ್ಯಮಂತ್ರಗಳಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.ಅಸಂಘಟಿತ ಕಾರ್ಮಿರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ, ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಶ್ರಮಜೀವಿಗಳಾದ ಎಪಿಎಂಸಿ, ಮಿಲ್, ಗೋಡಾನ್, ವೇರಹೌಸ್, ನಗರ ಗ್ರಾಮೀಣ ಬಜಾರ್ ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಬಂದರುಗಳಲ್ಲಿ ಲೋಡಿಂಗ್ ಅನ್‌ಲೋಡಿಂಗ್ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರ ಬದುಕಿನ ಪ್ರಮುಖ ಪ್ರಶ್ನೆಗಳಿಗಾಗಿ, ಪ್ರಮುಖ ಬೇಡಿಕೆಗಳಿಗಾಗಿ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಈ ಮನವಿಯನ್ನು ನೀಡಲಾಗಿದೆ ಎಂದು ಮುಖಂಡರಾದ ಯಂಕಪ್ಪ ಕೆಂಗಲ್ ಹೇಳಿದರು.
ನಗರದ ಪ್ರವಾಸಿ ಮಮದಿರದಿಂದ ಮೆರವಣಿಗೆ ಮೂಲಕ ಆಗಮಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರು ಮಾತನಾಡುತ್ತಾ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಹಣಕಾಸು ಸಂಪನ್ಮೂಲಗಳನ್ನು ಕ್ರೂಢಿಕರಿಸುವ ಯೋಜನೆಯನ್ನು ರೂಪಿಸಿ ಸಮಗ್ರ ಸಾಮಾಜಿಕ ಭದ್ರತೆಯನ್ನು ನೀಡಬೇಕೆಂದು ಹಾಗೂ ಎಪಿಎಂಸಿಯಲ್ಲಿ ನಿವೃತ್ತರಾದ ಹಮಾಲರಿಗೆ ಕನಿಷ್ಟ 1 ಲಕ್ಷ ನಿವೃತ್ತಿ ಪರಿಹಾರ ಅಥವಾ ಇಡಿಗಂಟು ನೀಡಬೇಕು ಮತ್ತು ಹೊಸ ಲೈಸನ್ಸ್ ನೀಡಬೇಕೆಂದು ಒತ್ತಯಿಸಿದರು.
ಈ ಸಣದರ್ಭದಲ್ಲಿ: ತಾಲೂಕು ಅಧ್ಯಕ್ಷ ನಾಗನಗೌಡ, ಕಾರ್ಯದರ್ಶಿ ಸತ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಮರಿಸ್ವಾಮಿ, ಹೊನ್ನುರಪ್ಪ ತುರ್ವಿಹಾಳ, ಮಹೇಶ, ಅಪ್ಪಣ್ಣ, ಲಿಂಗಪ್ಪ, ಹನುಮಂತ, ಇಬ್ರಾಹಿಮ್ ಸಾಬ್, ಮಾಬೂಸಾಬ್, ಶಕುಂತಲಾ, ಗೀರಿಜಾ ಕಿಲ್ಲೇದ್ ಇದ್ದರು

