ಮಾನ್ವಿ:ಡಿ.10.ತಾಲೂಕಿನ ಸಮೀಪದ ಪೋತ್ನಾಳ ಗ್ರಾಮದಲ್ಲಿ ಡಿ.13ರಂದು ಸ್ನೇಹ ಜ್ಯೋತಿ ವಿದ್ಯಾಲಯ ಚರ್ಚ್ ಶಾಲೆಯಲಿ ಸ್ನೇಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ.ಸುನಿಲ್ ಕರ್ನೆಲಿಯೋ ಹೇಳಿದರು.
ಪತ್ರಿಕೆ ಹೇಳಿಕೆ ನೀಡಿದ ಅವರು ಸ್ನೇಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವಂ.ಫಾ. ಚಾರ್ಲ್ಸ್ ಪುರ್ಟಾಡೊ ವಹಿಸಲಿದಾರೆ, ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜ್, ವಂ.ಫಾ.ಎರಿಕ್ ಮತಾಯಸ್ ಎಸ್ ಜೆ ಶಾಸಕ ಹಂಪಯ್ಯ ನಾಯಕ, ವಂ.ಪಾ. ಅಂತೋಣಿರಾಜ್, ಬಿಇಓ ಚಂದ್ರಶೇಖರ ದೊಡ್ಡಮನಿ, ಫಾ.ಸತೀಶ ಫೆರ್ನಾಂಡಿಸ್, ವಾಲಿಬಾಬು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀ ಈರಣ್ಣ, ಮಾನ್ವಿ ಪತ್ರಕರ್ತ ಸಂಘದ ಅಧ್ಯಕ್ಷ ನಾಗರಾಜ್ ತಡಕಲ್, ಫಾ. ಡೊಮಿನಿಕ್ ಸುನಿಲ್ ಲೋಬೋ, ಫಾ.ಪ್ರಶಾಂತ್ ಸಿಸ್ಟರ್ ಜೋಶ್ನಾ ಇತರರು ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು

