ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಹಟ್ಟಿ ರಸ್ತೆಗೆ ಅಥವಾ ಜೈನ್ ಕಲ್ಯಾಣ ಮಂಟಪಕ್ಕೆ ಸಂಪರ್ಕಿಸುವ ಕುಷ್ಟಗಿ ಮುಖ್ಯ ರಸ್ತೆಯಲ್ಲಿ ಕಳೆದ ಏಳೆಂಟು ತಿಂಗಳ ಹಿಂದೆ ಯುಜಿಡಿ ಕಾಮಗಾರಿಗಾಗಿ ತೋಡಿದ ಗುಂಡಿ ಸರಿಯಾಗಿ ಮುಚ್ಚದೆ, ಬರಿ ಮಣ್ಣು ಹಾಕಿ ಬಿಟ್ಟಿದ್ದಾರೆ. ಇದುವರೆಗೂ ಕೂಡ ಈ ರಸ್ತೆ ರಿಪೇರಿ ಮಾಡುತ್ತಿಲ್ಲ. ಇದನ್ನು ದುರಸ್ತಿ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ನಗರಸಭೆ ಮುಂದೆ ಹೋರಾಟ ನಡೆಸಲಾಗುವುದು ಎಂದು ನಗರಸಭೆ ಸದಸ್ಯ ರಾಜಶೇಖರ ಕೆ ಹೇಳಿದರು.

ನಗರದ ಬಸವ ಸರ್ಕಲ್ ಹತ್ತಿರದ ಕುಷ್ಟಗಿ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ತಗ್ಗು ದಿಣ್ಣೆಯನ್ನು ಉದ್ದೇಶಿಸಿ ಬಿಜೆಪಿ ಪಕ್ಷದಿಂದ ಪ್ರತಿಭಟಿಸಿ ಮಾತನಾಡಿದರು.

ನಂತರ ನಗರ ಘಟಕದ ಅಧ್ಯಕ್ಷ ಸಿದ್ರಾಮೇಶ ಮನ್ನಾಪೂರು ಮಾತನಾಡಿ, ಈಗಾಗಲೇ ಅನೇಕ ಸಾರಿ ಮಾಧ್ಯಮದವರ ಗಮನಕ್ಕೆ ತಂದು ಪತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ಕೂಡ ಇಲ್ಲಿಯವರೆಗೆ ಯಾವ ಇಲಾಖೆ ಅಧಿಕಾರಿಗಳು ಈ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ. ಈ ಗುಂಡಿ ಬಿದ್ದಿರುವ ಜಾಗದಲ್ಲಿ ಕ್ರಾಸಿಂಗ್ ಇದೆ. ಹೀಗಾಗಿ ಪ್ರತಿನಿತ್ಯ ಬಹಳಷ್ಟು ಅಪಘಾತಗಳು ಆಗುತ್ತಿವೆ. ಶಾಲೆ ಮಕ್ಕಳಿಂದ ಹಿಡಿದು, ಪ್ರತಿಯೊಬ್ಬ ವಾಹನ ಸವಾರರಿಗೆ, ಸಾರ್ವಜನಿಕರಿಗೆ, ತೊಂದರೆಯಾಗುತ್ತಿದೆ.

ಈ ಬಸವೇಶ್ವರ ವೃತ್ತದ ಸುತ್ತಲೂ ತರಕಾರಿ ಮಾರಕೇಟ್, ದಿನಸಿ ಅಂಗಡಿಗಳ ಮಾರಕೇಟ್ ಇರುವುದರಿಂದ ಜನಸಂದಣಿ ಬಹಳವಿದೆ. ಯುಜಿಡಿ ಅಧಿಕಾರಿಗಳಿಗೆ ಹೇಳಿದರೆ, ನಗರಸಭೆಗೆ ಸಂಬಂಧಿಸಿದ್ದು ಅನ್ನುತ್ತಿದ್ದಾರೆ. ನಗರಸಭೆಯವರಿಗೆ ಕೇಳಿದರೆ, ಪಿಡಬ್ಲ್ಯೂಡಿಯವರ ಮೇಲೆ ಹೇಳುತ್ತಿದ್ದಾರೆ, ಹಾಗಾದರೆ ಈ ರಸ್ತೆ ದುರಸ್ತಿ ಯಾರು ಮಾಡಬೇಕು ? ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾರಿಕೆ ಉತ್ತರ ಕೊಟ್ಟರೆ ಸಾರ್ವಜನಿಕರ ಪಾಡೇನು ?

ಇನ್ನೂ ಎರಡು ದಿನದೊಳಗಾಗಿ ಸಂಪೂರ್ಣ ರಸ್ತೆ ದುರಸ್ತಿ ಮಾಡಿ, ಡಾಂಬರಿಕರಣ ಅಥವಾ ಸಿಸಿ ರಸ್ತೆ ಮಾಡಲೇಬೇಕು ಅಕಸ್ಮಾತ್ ಅಧಿಕಾರಿಗಳು ಮುತುವರ್ಜಿ ವಹಿಸದಿದ್ದರೆ,  ನಿರ್ಲಕ್ಷ್ಯ ಮಾಡಿದರೆ
ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ: ಫಕೀರಪ್ಪ ತಿಡಿಗೋಳ, ಜಗದೀಶ ಕೆ, ಶರಣಪ್ಪ ದುಮತಿ, ರಮೇಶ ಮಾಡಸಿರವಾರ, ಮೌನೇಶ ಹೊಸಮನಿ, ಬೀರಪ್ಪ, ನಾಗರಾಜ ದೇವರಗುಡಿ, ಕಾಶಿನಾಥ, ರಮೇಶ ಮಡಿವಾಳ, ಮುತ್ತುಬರ್ಸಿ, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *