ಮಾನ್ವಿ : ತಾಲೂಕಿನ ಸುವರ್ಣಗಿರಿ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ ಶ್ರೀ ಲಿಂ.ಶಾಂತಮಲ್ಲ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ಅಂಗವಾಗಿ ಸುವರ್ಣಗಿರಿ ವೀರಕ್ತಮಠ ವಳ್ಳಬಳ್ಳಾರಿಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀ ಲಿಂ.ಶಾಂತಮಲ್ಲ ಮಹಾಸ್ವಾಮಿಗಳವರ ಕತೃ ಗದ್ದುಗೆಗೆ ರುದ್ರಾಭೀಷೇಕ ,ಮಹಾಮಂಗಳರಾತಿ ನಡೆಸಲಾಯಿತು.
ಶ್ರೀ ಮಠದ ಆವರಣದಲ್ಲಿ ಹಾನಗಲ್ ಶ್ರೀ ಗುರುಕುಮಾರೇಶ್ವರ ವೇದಿಕೆಯಲ್ಲಿ ನಡೆದ ಶ್ರೀ ಲಿಂ.ಶಾಂತಮಲ್ಲ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸುವರ್ಣಗಿರಿ ವೀರಕ್ತಮಠ ವಳ್ಳಬಳ್ಳಾರಿಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಾಚನ ನೀಡಿ ಹಿಂದಿನ ದಿನಗಳಲ್ಲಿ ದಟ್ಟವಾದ ಅರಣ್ಯ ಪ್ರದೇಶವಾದ ಅಡವಿ ಅಮರೇಶ್ವರ ಗ್ರಾಮವನ್ನು ಸುವರ್ಣಗಿರಿ ವೀರಕ್ತಮಠ ವಳ್ಳಬಳ್ಳಾರಿಯ ಲಿಂ.ಚನ್ನಬಸವ ಶಿವಯೋಗಿಗಳು ತಮ್ಮ ಶಿವಯೋಗದ ಶಕ್ತಿಯಿಂದ ಪುಣ್ಯಮಯವಾದ ಸುಕ್ಷೇತ್ರವನ್ನಾಗಿಸಿದರು. ಕಾಶಿಯಿಂದ ತಂದ ಲಿಂಗವನ್ನು ಪ್ರತಿಷ್ಟಾಪಿಸುವ ಮೂಲಕ ಭಕ್ತರ ಇಷ್ಟರ್ಥಗಳನ್ನು ನೀಡುವ ಜಾಗೃತ ಪುಣ್ಯಕ್ಷೇತ್ರವನ್ನಾಗಿಸಿದರೆ. ಹಾಗೂ ತಮ್ಮ ಕರಕಮಲ ಸಂಜತರಾದ ವಳ್ಳಬಳ್ಳಾರಿಯ ಮಠದ ಮರಿದೇವರನ್ನು ಶ್ರೀ ಅಡವಿ ಅಮರೇಶ್ವರ ಮಠಕ್ಕೆ ಪೀಠಾಧಿಕಾರಿಯನ್ನಾಗಿ ಶ್ರೀ ಲಿಂ.ಶಾಂತಮಲ್ಲ ಮಹಾಸ್ವಾಮಿಗಳವರನ್ನು ನೇಮಿಸಿದ್ದಾರೆ. ಶ್ರೀ ಲಿಂ.ಶಾಂತಮಲ್ಲ ಮಹಾಸ್ವಾಮಿಗಳವರು ಶಾಂತ ಸ್ವಭವದಿಂದ ಭಕ್ತರ ಹೃದಯದಲ್ಲಿ ಸ್ಥಾನವನ್ನು ಪಡೆದು ಶ್ರೀಮಠದ ಮೂಲಕ ಈ ಭಾಗದಲ್ಲಿ ಧಾರ್ಮಿಕ,ಶೈಕ್ಷಣಿಕ,ಸಾಹಿತ್ಯಿಕ, ಕ್ಷೇತ್ರಗಳಲ್ಲಿ ಹಲವು ಹತ್ತು ಕಾರ್ಯಕ್ರಮಗಳ ಮೂಲಕ ಶ್ರೀಮಠವನ್ನು ಶ್ರೀಮಂತಗೊಳಿಸಿ ಭಕ್ತರನ್ನು ಉದ್ದಾರ ಮಾಡಿ ಶಿವನಲ್ಲಿ ಲಿಂಗೈಕ್ಯರಾಗಿದ್ದಾರೆ. ಉತ್ತರಾಧಿಕಾರಿಗಳಾದ ಶ್ರೀ ಸುವರ್ಣಗಿರಿ ಶ್ರೀ ಅಡವಿ ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳಿಗೂ ಕೂಡ ಶ್ರೀಮಠದ ಭಕ್ತರು ತಮ್ಮ ಮನೆಯ ಮಗನಂತೆ ಗೌರವ,ಭಕ್ತಿಯ ಮೂಲಕ ಶ್ರೀ ಮಠದ ಅಭಿವೃದ್ದಿ ಮಾಡುವುದಕ್ಕೆ ಸಹಕಾರ ನೀಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುವರ್ಣಗಿರಿ ವೀರಕ್ತಮಠ ವಳ್ಳಬಳ್ಳಾರಿಯ ಕಿರಿಯ ಶ್ರೀಗಳಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ,ಯದ್ದಲದೊಡ್ಡಿ ಸುವರ್ಣಗಿರಿ ವೀರಕ್ತಮಠದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಸುವರ್ಣಗಿರಿ ಶ್ರೀ ಅಡವಿ ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು ,ಸಂತೆಕಲ್ಲೂರು ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು, ಕರೆಗುಡ್ಡ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು, ಸಿರುಗುಪ್ಪ ಶ್ರೀ ಬಸವ ಮಹಾಮನೆಯ ಶ್ರೀ ಬಸವಭೂಷಣ ಮಹಾಸ್ವಾಮಿಗಳು ಸೇರಿದಂತೆ ಗಣ್ಯರು ,ಶ್ರೀಮಠದ ಭಕ್ತರು ಭಾಗವಹಿಸಿದರು.
ಮಾನ್ವಿ : ತಾಲೂಕಿನ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ ಶ್ರೀ ಲಿಂ.ಶಾಂತಮಲ್ಲ ಮಹಾಸ್ವಾಮಿಗಳವರ ಕತೃ ಗದುಗೆಗೆ ರುದ್ರಭಿಷೇಕ ನಡೆಸಲಾಯಿತು.
ಮಾನ್ವಿ : ತಾಲೂಕಿನ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ ಶ್ರೀ ಲಿಂ.ಶಾಂತಮಲ್ಲ ಮಹಾಸ್ವಾಮಿಗಳವರ ಪುಣ್ಯಸ್ಮಾರಣೋತ್ಸವ ಅಂಗವಾಗಿ ಸುವರ್ಣಗಿರಿ ವೀರಕ್ತಮಠ ವಳ್ಳಬಳ್ಳಾರಿಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು ಆರ್ಶೀವಚನ ನೀಡಿದರು

Leave a Reply

Your email address will not be published. Required fields are marked *