ಮಾನ್ವಿ : ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಗಾನವಿ ವಿದ್ಯಾರ್ಥಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ತಾಲ್ಲೂಕಿನ ಚಿಕ್ಕಕೊಟ್ನೇಕಲ್ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋತ್ನಾಳ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ, ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಗಾನವಿ ಇಂಗ್ಲೀಷ್ನಲ್ಲಿ ಕಂಠಪಾಠ ಸಾಧನೆ ಮಾಡಿ, ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.ಸತತ ಎರಡನೇ ಬಾರಿ ಸಾಧನೆ
ಕುಮಾರಿ ಗಾನವಿಯವರ ಪ್ರತಿಭೆಗೆ ಇದು ಮೊದಲ ಮನ್ನಣೆಯಲ್ಲ. ಕಳೆದ ವರ್ಷ ಕೂಡ ಪೋತ್ನಾಳ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅವರು ಪ್ರಥಮ ಸ್ಥಾನ ಪಡೆದಿದ್ದರು. ಈ ಮೂಲಕ, ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಪಡೆದು ತಮ್ಮ ಪ್ರತಿಭೆಯನ್ನು ಸ್ಥಿರವಾಗಿ ಪ್ರದರ್ಶಿಸಿದ್ದಾರೆ.
ಗಾನವಿ ಅವರು ತಂದೆ ರಾಮನಗೌಡ ಅವರ ಪುತ್ರಿಯಾಗಿದ್ದು, ಇವರ ಈ ಸಾಧನೆಯಿಂದ ದೇವಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಪೋಷಕರು ಮತ್ತು ದೇವಿಪುರ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಗಾನವಿಯವರ ಮುಂದಿನ ತಾಲೂಕು ಮಟ್ಟದ ಹಂತದ ಸ್ಪರ್ಧೆಗಳಿಗೆ ಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕಿಯರು ಹಾಗೂ ಅತಿಥಿ ಶಿಕ್ಷಕರ ಸೇರಿದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಶುಭ ಹಾರೈಸಲಾಗಿದೆ.

