ತಾಳಿಕೋಟಿ: ಪಟ್ಟಣದ ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಯಿತು. ಸ್ಥಳೀಯ ರಿಲಾಯನ್ಸ್ ಕಾಲೇಜಿನ ಉಪನ್ಯಾಸಕರಾದ ತನ್ವೀರ ಅತ್ತಾರ ಇವರು ಗಣಿತ ವಿಷಯದ ಕುರಿತು ತಮ್ಮ ಉಪನ್ಯಾಸದ ಮೂಲಕ ಉಪಯುಕ್ತವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಸತತ ನಾಲ್ಕು ಅವಧಿಯನ್ನು ತೆಗೆದುಕೊಂಡು ಅವರು ಈ ಉಪನ್ಯಾಸವನ್ನು ನೀಡಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕ ತನ್ವೀರ್ ಅತ್ತಾರ ಇವರನ್ನು ಸಂಸ್ಥೆಯ ಪರವಾಗಿ ಪ್ರೌಢಶಾಲೆ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ವರ್ಗ ಶಿಕ್ಷಕ ಎಸ್.ಸಿ.ಗುಡಗುಂಟಿ, ಹಿರಿಯ ಶಿಕ್ಷಕ ಬಿ.ಐ.ಹಿರೇಹೊಳಿ, ದೈಹಿಕ ಶಿಕ್ಷಕ ಎಂ.ಎಸ್.ರಾಯಗೊಂಡ, ದುಳಿಂಗ ಪೂಜಾರಿ, ಕೆ.ಎನ್. ನಾಲತವಾಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

