ಲಿಂಗಸಗೂರು : ಡಿ 10 :- ತಾಲೂಕಿನ
ಸದರಿ ಪ್ರಕರಣದಲ್ಲಿ ಆರೋಪಿತನಾದ ಶಿವರಾಜ ತಂದೆ ಗದ್ದೆಪ್ಪ ಈತನು 2021 ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ಮಾನಭಂಗ ಮಾಡಲು ಪ್ರಯತ್ನಿಸಿ ಅವಳ ಬಟ್ಟೆ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು . ನ್ಯಾಯಾಲಯಕ್ಕೆ ಆಗಿನ ತನಿಖಾಧಿಕಾರಿ ಎಸ್ ಎಸ್ ಹುಲ್ಲೂರು ಡಿವೈಎಸ್‌ಪಿ ತನಿಖೆ ಮಾಡಿ ದೋಷರೋಪಣೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಬಿ.ಬಿ.ಜಕಾತಿ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು ಇವರು ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ಆರೋಪಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಸಾಬೀತಾಗಿದ್ದರಿಂದ ಆರೋಪಿಗೆ 05 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 65 ಸಾವಿರ ರೂ ದಂಡ ವಿಧಿಸಿ ದಂಡದ ಮೊತ್ತವನ್ನು ಭಾದಿತಳಿಗೆ ( ಬಾಲಕಿಗೆ ) ನೀಡುವಂತೆ ಇಂದು ನ್ಯಾಯಾಲಯವು ತೀರ್ಪು ನೀಡಿದ್ದು ಇರುತ್ತದೆ. ಮತ್ತು ಸರಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಆದೇಶ ಮಾಡಿರುತ್ತಾರೆ. ಸರಕಾರದ ಪರವಾಗಿ ಮಂಜುನಾಥ ಬೇರಿ ಸರಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ ಹಾಗೂ ನಿಂಗಯ್ಯ ಮತ್ತು ಮಂಜುನಾಥ ಪಿ.ಸಿ.ರವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಹಾಜರುಪಡಿಸಿರುತ್ತಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

