ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ರಾಗಲಪರ್ವಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಸದರಿ ಕಾರ್ಯಕ್ರಮವನ್ನು ಮಾನ್ಯ ಆಯುಷ್ ವೈದ್ಯಾಧಿಕಾರಿಗಳು ಶ್ರೀಮತಿ ಡಾ. ಶ್ವೇತಾಂಬರಿ ಇವರು ಗರ್ಭಿಣಿ ತಾಯಂದಿರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಗಂಡಾಂತರ ಗರ್ಭಿಣಿಯರ ಆರೋಗ್ಯ ತಪಾಷಣೆ ಮಾಡಲಾಯಿತು, ಜೊತೆಗೆ 12ವಾರದ ಒಳಗೆ ನೋಂದಣಿ ಮಾಡಿಸಬೇಕು ಯಾವುದೇ ಮೂಢನಂಬಿಕೆ ಬಿಡಬೇಕು,ರಕ್ತ ಹೀನತೆ ಹೋಗಲಾಡಿಸಲು ಐರನ್ ಫಾಲಿಕ್ ಅಸೈಡ್ ಕಾಲ್ಸಿಯಂ ಮಾತ್ರೆ ತೆಗೆದುಕೊಂಡು, ಸರಿಯಾಗಿ ಆಹಾರದ ಪದ್ಧತಿ ಇರಬೇಕು ಪೌಷ್ಟಿಕ ಆಹಾರ ಪದ್ಧತಿ ಬಗ್ಗೆ ವೈಯಕ್ತಿಕ ಸ್ವಚ್ಛತೆಯ ಕುರಿತು ಚಳಿಗಾಲದಲ್ಲಿ ತಾಯಿ ಮಗುವಿನ ರಕ್ಷಣೆಯ ಕುರಿತು ಮಾಹಿತಿ ನೀಡಲಾಯಿತು ಸಾಂಕ್ರಾಮಿಕ ರೋಗಗಳ ಕುರಿತು ಮುಂಜಾಗ್ರತೆಯನ್ನು ವಹಿಸಬೇಕು ಎಂದು ಆರೋಗ್ಯ ಶಿಕ್ಷಣ ನೀಡಲಾಯಿತು ಮುಂಬರುವ ಡಿಸೇಂಬರ್ 21ರಿಂದ 24ರವರೆಗೆ ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮ ದಲ್ಲಿ ಯಾವುದೇ 5 ವರ್ಷದ ಒಳಗಿನ ಮಕ್ಕಳು ಲಸಿಕೆಯಿಂದ ವಂಚಿತರಗದಂತೆ ಎಲ್ಲಾ ಮಕ್ಕಳಿಗೂ ಲಸಿಕೆಯ ಎರಡು ಹನಿ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ, ಈ ಸಂದರ್ಭದಲ್ಲಿ ಶ್ರೀಮತಿ ಗೀತಾ ಹಿರೇಮಠ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಶ್ರೀ ಪಕೀರಚಂದ್ Sr. HIO, ಶ್ರೀಮತಿ ಗೀತಾ ನರ್ಸಿಂಗ್ ಆಫೀಸರ್,ಶ್ರೀ ಶಂಬು LTO, ರಾಜಕುಮಾರ CHO, ಜಯದುರ್ಗ, CHO. ಶ್ರೀಮತಿ ಗಂಗಮ್ಮPHCO,ಅಂಬಮ್ಮ PHCO, ಶ್ರೀಮತಿ ನಳಿನಿ PHCO.ಶ್ರೀಮತಿ ಶರಣಮ್ಮ HIO, ಹಾಗೂ ಡಿ ದರ್ಜೆ ನೌಕರರು,ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಸಾರ್ವಜನಿಕರು ಉಪಸ್ಥಿತರಿದ್ದರು

