ಹಟ್ಟಿ ಚಿನ್ನದ ಗಣಿ:
ಬೆಳಕು ಯೂತ್ ಫೌಂಡೇಶನ್ ವತಿಯಿಂದ ಹಟ್ಟಿ ಚಿನ್ನದ ಗಣಿ (ಕ್ಯಾಂಪ್)ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ಕೊಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮ ಕುರಿತು ಮಾತನಾಡಿದ ಎಐಟಿಯುಸಿ ಮುಖಂಡರಾದ ಚಂದ್ರಶೇಖರ್ ಮಾತನಾಡಿ ಸರ್ಕಾರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಂಥ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುವಂತ ವಿದ್ಯಾರ್ಥಿಗಳಿಗೆ ಬೆಳಕು ಯೂತ್ ಫೌಂಡೇಶನ್ ವತಿಯಿಂದ ಪಾಠ ಪುಸ್ತಕ ವಿತರಣೆ ಮಾಡಲಾಯಿತು.ಇದರ ಜೊತೆಗೆ ಕ್ರೀಡಾಪಟುಗಳಿಗೆ ಮತ್ತು 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವಂಥ ಕ್ರೀಡಾಪಟುಗಳಿಗೆ ಕ್ರಿಕೆಟ್ ಕಿಟ್,ವಾಲಿಬಾಲ್,ಫುಟ್ಬಾಲ್,ಹಾಗೂ ಇನ್ನಿತರ ಕ್ರೀಡಾ ಸಮಗ್ರಿಗಳನ್ನು ಬೆಳಕು ಯೂತ್ ಫೌಂಡೇಶನ್ ವತಿಯಿಂದ ವಿತರಣೆ ಮಾಡಲಾಯಿತು.ಅದೇ ರೀತಿ ಗಣರಾಜ್ಯೋತ್ಸವ ಅಗಸ್ಟ್ 15 ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ರಕ್ತದಾನ ಶಿಬಿರ ಮಾಡುವುದರ ಜೊತೆಗೆ ಹಲವಾರು ಜನ ಪರ ಕೆಲಸಗಳನ್ನು ಮಾಡುತ್ತಾ ಬಂದಿದೆ.ಇಷ್ಟೆಲ್ಲಾ ಕೆಲಸಗಳಿಗೆ ಮೂಲ ಪ್ರೇರಣೆ ಎಂದರೆ ನಮ್ಮವರೇ ಹಾಗೂ ಸ್ಥಳೀಯರು ಆಗಿರುವ ಶ್ರೀರಾಜಶೇಖರ(ಕರ್ನಾಟಕ ಆಡಳಿತ ಸೇವೆ)ಇವರು ಯಾವಾಗಲೂ ಬೆಳಕು ಯೂತ್ ಫೌಂಡೇಶನ್ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದು ನಮ್ಮ ಸಂಸ್ಥೆಯ ಪದಾಧಿಕಾರಿಗಳು ಅವರನ್ನು ಭೇಟಿಯಾಗಿ ಕೇಳಿದಾಗ ಅವರು ಸರಕಾರ ಮಟ್ಟದಲ್ಲಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಬೆಳಕು ಯೂತ್ ಫೌಂಡೇಶನ್ ಜೊತೆಗೆ ಅವರು ಕೈಜೋಡಿಸಿದ್ದಾರೆ.ಈ ವೇದಿಕೆಯ ಮುಖಾಂತರ ಶ್ರೀಯುತ ರಾಜಶೇಖರ್ ಅವರಿಗೆ ಬೆಳಕು ಯೂತ್ ಫೌಂಡೇಶನ್ ವತಿಯಿಂದ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ತಿಳಿಸುತ್ತಾ.ಹೀಗೆ ಜನ ಮುಖಿವಾಗಿ ಕೆಲಸ ಮಾಡುವಂತಹ ಬೆಳಕು ಯೂತ್ ಫೌಂಡೇಶನ್ ಸಂಸ್ಥೆಯು 2023 ರಿಂದ ಪ್ರಾರಂಭವಾಗಿ ಅಂದಿನಿಂದ ನಿರಂತರವಾಗಿ ಜನರ ಮಧ್ಯೆ ಇದ್ದುಕೊಂಡು ಹಲವಾರು ಜನಪರ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಇದೆ.ಬೆಳಕು ಯೂತ್ ಫೌಂಡೇಶನ್ ಸಂಸ್ಥೆಗೆ ಅಧ್ಯಕ್ಷರಾಗಿ ಸ್ಥಳೀಯರಾದ ರಾಜಕುಮಾರ.ಉಪಾಧ್ಯಕ್ಷರಾಗಿ ತಿಪ್ಪಣ್ಣ ಮಾಚುನೂರು,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಫೆಚ್ಚೆಲಮ್ಮ ,ಕಾರ್ಯದರ್ಶಿಯಾಗಿ ಚಂದ್ರಶೇಖರ್, ಇನ್ನು ಅನೇಕರು ಸೇರಿ ಒಂದು ಒಗ್ಗಟ್ಟಿನಿಂದ ಕೆಲಸ ಮಾಡುತ್ತಾ ಇದ್ದೇವೆ.ಮುಂದಿನ ದಿನಗಳಲ್ಲಿ ಬೆಳಕು ಯೂತ್ ಫೌಂಡೇಶನ್ ಸಂಸ್ಥೆಯು ಹಲವಾರು ಜನಪರ ಯೋಜನೆಗಳನ್ನು ಸರಕಾರದ ಮಟ್ಟದಲ್ಲಿ ತಂದು ಹಟ್ಟಿ ನಾಗರಿಕರಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗೆ ಹಾಗೂ ಯುವ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಬೆಳಕು ಯೂತ್ ಫೌಂಡೇಶನ್ ಸಂಸ್ಥೆ ಕೆಲಸ ಮಾಡುತ್ತದೆ ಎಂದು ಮಾತನಾಡಿದರು.
ಅದೇ ರೀತಿ ಶ್ರೀಮತಿ ಫ್ರೆಂಚಲಮ್ಮ ಮಾತನಾಡಿ ಬೆಳಕು ಯೂತ್ ಫೌಂಡೇಶನ್ ಗೆ ಅನೇಕ ರೀತಿಯಿಂದ ರಾಜಶೇಖರ್ ಸರ್ ಅವರ ಜೊತೆ ಮಾತನಾಡಿ ಹಟ್ಟಿಯಲ್ಲಿ ನಾವು ಏನಾದರೂ ಒಂದು ಕೆಲಸ ಮಾಡಬೇಕು ಎಂದರೆ ರಾಜಶೇಖರ್ ಸರ್ ನಮಗೆ ಸಹಕಾರಿಯಾಗಿ ಸರಕಾರದಿಂದ ನಮಗೆ ಕೆಲಸ ಮಾಡಿಕೊಡುತ್ತಾರೆ.ಅದೇ ರೀತಿ ಸರ್ಕಾರ ಮಟ್ಟದಲ್ಲಿ ಏನೇನು ಯೋಜನೆಗಳಿವೆ ಎಂದು ತಿಳಿಸಿ ಸಂಸ್ಥೆಗೆ ನಮಗೆ ಅನುಕೂಲವಾಗುವ ರೀತಿಯಲ್ಲಿ ಸಹಾಯ ಸಹಕಾರ ನೀಡುತ್ತಾರೆ ಎಂದು ಮಾತನಾಡಿದರು.
ಈ ವೇದಿಕೆಯಲ್ಲಿ ಬೆಳಕು ಯೂತ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ರಾಜಶೇಖರ್ ಹಾಗೂ ಎ ಐ ಟಿ ಯು ಸಿ ಮುಖಂಡರಾದ ಚಂದ್ರಶೇಖರ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೆಳಕು ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರು ರಾಜಶೇಖರ್,ಉಪಾಧ್ಯಕ್ಷ ತಿಪ್ಪಣ್ಣ ಮಾಚನೂರು ,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪೆಂಚಲಮ್ಮ ,ಜಂಟಿ ಕಾರ್ಯದರ್ಶಿ ನವೀನ್ ,ಎಐಟಿಯುಸಿ ಮುಖಂಡರಾದ ಚಂದ್ರಶೇಖರ್,ಕಾರ್ಮಿಕ ಮುಖಂಡರುಗಳಾದ ನರಸಪ್ಪ ಬದರದಿನ್ನಿ,ಮುನಿರ್ದ್ದೀನ್ ,ಸಲೀಂ ಪಾಷಾ ,ಅಬ್ರಹಾಂ ,ಗಂಗೂ ಶಾಕೋದಿ ,ಕುಟೇಮ್ಮ,ಮೌನುದ್ದೀನ್ ಬೂದಿನಾಳ,ಸಾಬುದ್ದೀನ್ , ಆನಂದ ಕೊಠಾ,ಹಾಗು ಎಐಟಿಯುಸಿ ಕಾರ್ಯಕರ್ತರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಮೌಲಾಸಾಬ್ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.


