ಸಿಂಧನೂರು. ಡಿ. 6. ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಯಿಂದ ಕೆಲಸ ಮಾಡುವ ಮೂಲಕ ಪಲ್ಸ್ ಪೋಲಿಯೊ ಮುಕ್ತ ತಾಲುಕನ್ನಾಗಿ ಮಾಡಬೇಕು ಎಂದು ತಹಸೀಲ್ದಾರ ಅರುಣ ಹೆಚ್ ದೇಸಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ತಹಸೀಲ್ದಾರ ಕಚೇರಿಯಲ್ಲಿ ಕರೆದ ಪಲ್ಸ್ ಪೋಲಿಯೊ ಕಾರ್ಯಕ್ರಮದ ತಾಲುಕಾ ಮಟ್ಟದ ಟಾಸ್ಕ್ ಪೊರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಯಾ ಗ್ರಾಮ ಪಂಚಾಯ್ತಿ ಪಿಡಿಒಗಳು ಗ್ರಾಮದಲ್ಲಿರುವ ದೇವಸ್ಥಾನ ಮೈಕ್ ಮೂಲಕ ಹಾಗೂ ಡಂಗೂರ ಬಾರಿಸುವ ಮುಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಹಾಗೂ ನಗರಸಭೆ ಕಸದ ವಾಹನದ ಮೂಲಕ ಸಹ ಪ್ರಚಾರ ಮಾಡಬೇಕು ಎಂದರು .
ಬಸ ನಿಲ್ದಾಣ. ರೈಲ್ವೆ ಟೇಷನ್ ಗಳಲ್ಲಿ ಪೋಲಿಯೊ ಬೂತ ಮಾಡಿ ಮಕ್ಕಳಿಗೆ ಪೋಲಿಯೊ ಹಾಕಬೇಕು ಯಾವ ಮಗು ಸಹ ಪೋಲಿಯೊ ದಿಂದ ವಂಚಿತ ರಾಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ಆರೋಗ್ಯ ಇಲಾಖೆ ಜೋತಗೆ ಎಲ್ಲಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ಯಾಗೀದೆ ಎನ್ನುವದನ್ನು ಮರೆಯಬಾರದು ಎಂದರು .
ದಿನಾಂಕ 21.12.2025,ರಿಂದ 24.12.2025 ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಇರುತ್ತದೆ ಆದ್ದರಿಂದ ಅಂದು ಯಾವದೆ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಟ್ ಯಾಗದಂತೆ ನೋಡಿಕೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಗೆ ಸೂಚನೆ ನೀಡಿ ಎಲ್ಲಾ ಅಂಗನವಾಡಿ ಕೇಂದ್ರ ಗಳಲ್ಲಿ ಕಡ್ಡಾಯವಾಗಿ ಪೋಲಿಯೊ ಬೂತ ಮಾಡಬೇಕು ಎಷ್ಷು ಪ್ರಗತಿ ಪಾಗಿದೆ ಎನ್ನುವ ಮೇಲೆ ಉಸ್ತುವಾರಿ ಯನ್ನು ಅಂಗನವಾಡಿ ಸೂಪರ ವೈಜರ ವರದಿ ತೆಗೆದುಕೊಂಡು ನನಗೆ ಕೋಡಬೇಕು ಅಲಕ್ಷೆ ಮಾಡಬಾರದು ಎಂದು ಸುಪರ ವೈಜರಗಳಿಗೆ ತಾಕೀತು ಮಾಡಿದರು.
ತಾ. ಪ.ಇಒ ಚಂದ್ರಶೇಖರ ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ .ಬಿಇಓ ಬಸಲಿಂಗಪ್ಪ ಜವಳಗೇರಾ ಟಿ ಹೆಚ್ಒ ಡಾ ಅಯ್ಯನಗೌಡ. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ ಸುರೇಶ. ಡಾ ಮೇರಿ. ಡಾ ನಾಗರಾಜ ಡಾ. ಶ್ವೆತಾಂಬರಿ.ಹಿರಿಯ ಆರೋಗ್ಯ ನಿರೀಕ್ಷರಾದ ರಂಗನಾಥ ಗುಡಿ ಸಂಗನಗೌಡ ಪಾಟೀಲ. ಕ್ಷೇತ್ರ ಆರೋಗ್ಯ ಶಿಕ್ಷಾಣಾದಿಕಾರಿಗಳಾದ ಬಾಲಪ್ಪ ನಾಯಕ. ಗೀತಾ ಹಿರೆಮಠ
ಜೇಸ್ಕಾ. ಸಿಡಿಪಿಓ. ಸಾರಿಗೆ ಇಲಾಖೆ. ಕಾರ್ಮಿಕ ಇಲಾಖೆ.ಐಎಂಎ ಅಧ್ಯಕ್ಷರು.ಆರೋಗ್ಯ ಇಲಾಖೆಯ ತ್ರಿವೇಣಿ BPM, ಜಿಲ್ಲಾ IFV ಮೇಲ್ವಿಚಾರಕರುರಾಘವೇಂದ್ರ,ಹನುಮಂತ ಸೇರಿದಂತೆ ನಗರ ಆರೋಗ್ಯ ಇಲಾಖೆ. ತಾಲುಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಸಭೆಯಲ್ಲಿದ್ದರು.

