ರಾಯಚೂರು ಡಿಸೆಂಬರ್ 06 (ಕರ್ನಾಟಕ ವಾರ್ತೆ): ಜಿಲ್ಲೆಯ ಲಿಂಗಸುಗೂರು ಹಾಗೂ ಮಸ್ಕಿ ತಾಲೂಕಿನ ಮೀನುಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮಾರ್ಗಸೂಚಿಯನ್ವಯ ಮಹತ್ವಕಾಂಕ್ಷಿ ಯೋಜನೆಯಾದ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಆಭಿಯಾನ ಯೋಜನೆಯಡಿ ತಾಜಾ ಮೀನು ಮಾರಾಟ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತೊಡಕಿ, ಕುಮಾರಖೇಡ, ಹಾಲಭಾವಿ, ಹಿರೆ ಉಪ್ಪೇರಿ, ಅಡವಿಭಾವಿ(ನಿ), ರಾಂಪೂರು, ಯಳಗುಂದಿ, ಯರಗೋಡಿ, ಕಡದರಗಡ್ಡಿ, ರಾಮಲೂಟಿ, ಪೈದೊಡ್ಡಿ, ಗೋಲಪಲ್ಲಿ, ಯರಜಂತಿ, ಬಂಡೆಭಾವಿ, ಪೂಲಭಾವಿ, ಹೊಸೂರು ಹಾಗೂ ಮಸ್ಕಿ ತಾಲ್ಲೂಕಿನ ಕಾಟಗಲ್, ಉಸ್ಕಿಹಾಳ, ತಿರ್ಥಭಾವಿ, ಯತಗಲ್, ಕಾಚಾಪೂರು, ಕೋಟೆಕಲ್, ಜಿನ್ನಾಪುರು, ತುಗ್ಗಲದಿನ್ನಿ, ತುಪ್ಪದುರು(ಕೆ), ಗೋನಾವಾರ್, ಬಸ್ಸಾಪುರು, ಹೂವಿನಭಾವಿ, ಬುದ್ದಿನಿ(ಸಾ), ಗುಡಿಹಾಳ, ಮಟ್ಟೂರು, ಕುಣಿಕೆಲ್ಲೂರು, ಮಿಟ್ಟೆಕೆಲ್ಲೂರು, ಸಂತೆಕೆಲ್ಲೂರು, ಮುಸಲಿಕಾರಲಕುಂಟಿ, ಬೇಡರಕಾರಲಕುಂಟಿ, ಅಂಕುಶದೊಡ್ಡಿ, ಮುದವಾಳ, ಡಬ್ಬೇರಮಡು, ಮಾರಲದಿನ್ನಿ, ಮೂಡಲದಿನ್ನಿ, ಜಕ್ಕೇರಮಡು, ವ್ಯಾಸನಂದಿಹಾಳ, ಕನ್ನಾಳ, ತಿಮ್ಮಾಪೂರು, ದಿಗ್ಗನಾಯಕನಭಾವಿ, ಬೆನಕನಾಳ, ಬೆಲ್ಲದಮರಡಿ, ವೆಂಕಟಾಪೂರು, ನಾಗರಬೆಂಚಿ, ಅಂತರಗಂಗಿ, ಮ್ಯಾದರಾಳ, ಮೇದಕಿನಾಳ, ಬೈಲಗುಡ್ಡ, ಹಡಗಲಿ, ದೇಸಾಯಿ ಬೋಗಾಪುರು, ಯರದೊಡ್ಡಿ, ತಲೆಖಾನ, ಯಕ್ಲಾಸ್‌ಪುರ, ವಟಗಲ್, ನೇಲ್ಕೋಲಾ, ಅಮೀನಗಡ, ಪಾಮನಕೆಲ್ಲೂರು, ಆನಂದಗಲ್, ರ‍್ವಾಪೂರು, ಬೆಂಚಮರಡಿ, ಇಲಾಲಪುರ, ಗುಡಿಹಾಳ, ಚಿಲಕರಾಗಿ, ಇರಕಲ್, ಬಸ್ಸಾಪುರ, ಜಂಗಮರಹಳ್ಳಿ, ಯದ್ದಲದಿನ್ನಿ, ರಾಮರಲದಿನ್ನಿ, ಹಾಲಾಪುರ, ಹಿರೆಕಡಬೂರು, ರಾಮಲದಿನ್ನಿ, ಕಬ್ಬೇರಹಾಳ, ತೋರಣದಿನ್ನಿ, ಗೂಗೆಹೆಬಾಳ, ಚಿಕ್ಕಲದಿನ್ನಿ, ಮಲ್ಕಾಪೂರು, ಮರಕಂದಿನ್ನಿ, ಸುಂಕನೂರು, ಮಲ್ಲದಗುಡ್ಡ, ಡೊನ್‌ಮರಡಿ, ಚಿಂಚರಕಿ ಗ್ರಾಮಗಳಿಗೆ ಯೋಜನೆಯಡಿ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಯೋಜನೆಯಡಿ ಜಿಲ್ಲೆಗೆ ನಿಗದಿಯಾದ ಗುರಿಗಳಾದ ದ್ವಿಚಕ್ರ ವಾಹನ-23, ತ್ರಿಚಕ್ರ ವಾಹನ-04 ಮತ್ತು ನೇರ ಮೀನು ಮಾರಾಟ-02 ಘಟಕಗಳನ್ನು ಅನುಷ್ಟಾನಗೊಳಿಸಲು ಕೇಂದ್ರ ಸರಕಾರವು ನೀಡಿರುವ ಪಟ್ಟಿಯಲ್ಲಿರುವ ಗ್ರಾಮಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಆಸಕ್ತರು ಅರ್ಜಿಯನ್ನು ಡಿಸೆಂಬರ್ 24ರೊಳಗಾಗಿ ಸಲ್ಲಿಸಬಹುದಾಗಿದೆ.
ಆಸಕ್ತ ಅರ್ಜಿದಾರರು ಹೆಚ್ಚಿನ ವಿವರಗಳನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು ಲಿಂಗಸೂಗೂರು ತಾಲ್ಲೂಕು ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಲಿಂಗಸುಗೂರು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
