ರಾಯಚೂರು: ಆಕಸ್ಮಿಕವಾಗಿಯಾಗಲಿ ಅಥವಾ ಜೀವನದ ತಪ್ಪು ಹೆಜ್ಜೆಗಳಿಂದಾಗಲಿ ವ್ಯಕ್ತಿಯು ಹೆಚ್‌ಐವಿ ಸೋಂಕಿಗೆ ಒಳಗಾಗಿ ಜೀವನದ ಸುಂದರ ಕ್ಷಣಗಳನ್ನು ದೂರ ಮಾಡಿಕೊಳ್ಳಬಾರದು, ಅದರಲ್ಲೂ ಅಪರಿಚಿತರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕವು ಸೋಂಕು ಹರಡಲು ಪ್ರಮುಖ ಪಾತ್ರ ವಹಿಸುತ್ತದೆ ಈ ದಿಶೆಯಲ್ಲಿ ನಾವೇಲ್ಲರೂ ಜಾಗೃತರಾಗೋಣ ವೆಂದು ರಾಯಚೂರು ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೇನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡ್ಯಾಪ್ಕೋ ಹಾಗೂ ಶ್ರೀ ಕೃಷ್ಣ ಪಾರಿಜಾತ ತಂಡ ಲೋಕಾಪೂರ ರವರ ಕಲಾಪ್ರದರ್ಶನದ ಮೂಲಕ, ಕಲ್ಮಲ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಜನಜಾಗೃತಿ ನೀಡಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ಈಶ್ವರ ರಂಗಾ, ಹಿರಿಯ ಮುಖಂಡರಾದ ಯಲ್ಲಪ್ಪ ಓತಪ್ಯಾಟಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಾನುಕಾಂತ ರೆಡ್ಡಿ, ಮುಖಂಡರಾದ ಗಂಗಪ್ಪ,
ಶ್ರೀನಿವಾಸ, ನರಸಪ್ಪ,
ಬಸ್ಸಪ್ಪ ಬಾಗಲಿ, ಕುಮಾರಸ್ವಾಮಿ, ರಂಗನಾಥ, ಆಶಾ ಕಾರ್ಯಕರ್ತೆಯರು, ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *