ಮಾನ್ವಿ : ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದು ಪೋತ್ನಾಳ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ವಲಿಬಾಬು ಅವರು ಹೇಳಿದರು
ತಾಲೂಕಿನ ಚಿಕ್ಕಕೊಟ್ನೇಕಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ಪೋತ್ನಾಳ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆ. ಶಿಕ್ಷಕರು ಮಕ್ಕಳ ಸೃಜನಶೀಲತೆ
ಗುಣ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿರಿ ಎಂದು ತಿಳಿಸಿದರು.
ನಂತರದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ಸುರೇಶ್ ಕುರ್ಡಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಬಡವರ ಮಧ್ಯಮ ವರ್ಗದ ಕುಟುಂಬದವರು.ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ನಿರಂತರವಾಗಿ ಆಗಬೇಕು ಮತ್ತು ಮಕ್ಕಳ ಪ್ರತಿಭೆ ಅರಳಲು ಇಲಾಖೆ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸುತ್ತಿದೆ. ಶಿಕ್ಷಕರು ನ್ಯಾಯಬದ್ಧ ತೀರ್ಪು ನೀಡಿರಿ ಎಂದು ಶಿಕ್ಷಕರಿಗೆ ಕಿವಿಮಾತು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಗಮೇಶ ಮುದೋಳ, ಗೋಪಾಲ ನಾಯಕ ಜುಕುರು,ಪೋತ್ನಾಳ ಸಿಆರ್‌ಪಿ ಲಕ್ಷ್ಮೀಕಾಂತ, ಶಾಲಾ ಮುಖ್ಯ ಶಿಕ್ಷಕಿ ಅಕ್ಕಮಹಾದೇವಿ ಹಾಗೂ ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ಗುಂಡಯ್ಯ ನಾಯಕ, ಗುರುರಾಜ, ವಿವಿಧ ಶಾಲೆಗಳ ಸಹ ಶಿಕ್ಷಕಿಯರು ಶಿಕ್ಷಕರು ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪೋಷಕರು ಅತಿಥಿ ಶಿಕ್ಷಕರು ಹಾಗೂ ಎಲ್ಲಾ ಶಾಲೆ ಮಕ್ಕಳು ಮತ್ತು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

