ಬಳಗಾನೂರು:ಮಕ್ಕಳಲ್ಲಿ ಅಡಗಿರುವ ವಿವಿಧ ಬಗೆಯ ಕಲಾಪ್ರತಿಭೆಯನ್ನು ಹೋರತರುವಂತ ಈಪ್ರತಿಭಾಕಾರಂಜಿ, ಕಲೋತ್ಸವ ಪ್ರಥಮ ವೇದಿಕೆಯಾಗಿದೆ. ಶಿಕ್ಷಕರು ನಿರ್ಣಾಯಕರು, ಇಲ್ಲಿ ಹರಳುವ ಮಕ್ಕಳ ಕಲಾಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳಸುವಂತೆ ಮಸ್ಕಿ ಕ್ಷೇತ್ರದ ಶಾಸಕ ಆರ್. ಬಸನಗೌಡ ತುರ್ವಿಹಾಳವರ ಪುತ್ರ ಯುವ ಮುಖಂಡ ಆರ್.ಸತೀಶಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಕರ್ನಾಟಕ ಸರಕಾರ ಜಿಪಂ ರಾಯಚೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಯಚೂರು, ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಅಧಿಕಾರಿಗಳ ಕಾರ್ಯಾಲಯ ಸಿಂಧನೂರು, ಬಳಗಾನೂರು ಸಮೂಹ ಸಂಪನ್ಮೂಲ ಕೇಂದ, ಪಿಎಂಶ್ರೀಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಹಮ್ಮಿಕೊಂಡ 2025-26 ನೇ ಸಾಲಿನ ವಲಯ ಮಟ್ಟದ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡ ಪ್ರತಿಭಾ ಕಾಂಜಿ, ಕಲೋತ್ಸವ ಕಾರ್ಯಕ್ರಮವನ್ನು ಜೋತಿ ಬೆಳಗಿಸಿ, ಡೋಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಉತ್ತಮ ಪ್ರದರ್ಶನ ನೀಡಿದ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಶಾಲೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳಗಿಸಲಿ ಎಂದರು.
ಕಾರ್ಯಕ್ರಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಶರಣಬಸವ ಕಂದ್ಗಲ್, ಸಿಆರ್‌ಪಿ ಗಜಾನಂದ ಸೇರಿ ಮುಖಂಡರು, ಶಿಕ್ಷಕರು ಮತ್ತಿತರರು ಕಾರ್ಯಕ್ರಮಕುರಿತು ಮಾತನಾಡಿ, ಹಾಗೂ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ನಾಡಗೀತೆ, ರೈತಗೀತೆ ಹಾಡಿದ ಶಿಕ್ಷಕರು- ಶಿಕ್ಷಕಿಯರು ಗಮನಸೆಳೆದರು. ಸನ್ಮಾನ : ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವಮುಖಂಡ ಆರ್.ಸತೀಶಗೌಡ ತುರ್ವಿಹಾಳ, ಬಿಆರ್‌ಪಿ ಮೋಹಿನುದ್ದೀನ್ ಗುಡದೂರು ಇಸಿಓಹುಲುಗಪ್ಪ, ನಿವೃತ್ತ ಎಸಿಓ ಹನುಮಂತಪ್ಪ, ಸೇರಿ ಕಾರ್ಯಕ್ರಮ ನೇರವೇರಿಸಲು ಸೇವೆಸಲ್ಲಿದ ಸೇವಾಧಾರಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಶಿವುಕುಮಾರನಾಯಕ, ಉಪಾಧ್ಯಕ್ಷ ಮಂಜುನಾಥಸ್ವಾಮಿ, ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷಬಸವರಾಜ ದೋತರಬಂಡಿ, ಮುಖ್ಯಗುರು ಮಹಾದೇವಮ್ಮ, ಪಿಎಂಶ್ರೀ ಸಾಲೆಯ ಮುಖ್ಯ ಗುರು ಮುತ್ತು ಅಂಗಡಿ, ಸೇರಿ ಪಪಂ ಸದಸ್ಯರು, ಮುಖಂಡರು, ಶಿಕ್ಷಣಪ್ರೇಮಿಗಳು, ವಲಯಮಟ್ಟದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಳಗನೂರು: ಪಟ್ಟಣದ ಪಿಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಹಮ್ಮಿಕೊಂಡ 2025-26 ನೇ ಸಾಲಿನ ವಲಯ ಮಟ್ಟದ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡ ಪ್ರತಿಭಾ ಕಾಂಜಿ, ಕಲೋತ್ಸವ ಕಾರ್ಯಕ್ರಮವನ್ನು ಜೋತಿ ಬೆಳಗಿಸಿ, ಡೋಳ್ಳು ಬಾರಿಸುವುದರ ಮೂಲಕ ಯುವಮುಖಂಡ ಆರ್. ಸತೀಶಗೌಡ ತುರ್ವಿಹಾಳ ಉದ್ಘಾಟಿಸಿದ ಮಾತನಾಡಿದರು.
