ರಾಯಚೂರು ಡಿಸೆಂಬರ್ 04 (ಕರ್ನಾಟಕ ವಾರ್ತೆ): ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಡಿಸೆಂಬರ್ 6 ರಿಂದ 10ರವರೆಗೆ 5 ದಿನಗಳ ಅವಧಿಯ ಅಂತರ-ಮಹಾವಿದ್ಯಾಲಯಗಳ ಗುಂಪು ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ವಾಲಿಬಾಲ್ (ಪುರುಷ ಮತ್ತು ಮಹಿಳೆಯರು), ಖೋ-ಖೋ (ಪುರುಷ ಮತ್ತು ಮಹಿಳೆಯರು), ಟೇಬಲ್ ಟೆನ್ನಿಸ್ (ಪುರುಷ ಮತ್ತು ಮಹಿಳೆಯರು), ಕಬಡ್ಡಿ (ಪುರುಷರು) ಹೀಗೆ ಗುಂಪು ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಗುಂಪು ಕ್ರೀಡಾ ಪಂದ್ಯಾವಳಿಗಳಿಗೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಹನುಮಂತಪ್ಪರವರು ಡಿಸೆಂಬರ್ 6 ರಂದು ಚಾಲನೆ ನೀಡುವರು.
ಈ ಪಂದ್ಯಾವಳಿಗಳಲ್ಲಿ ಕೃಷಿ ಮಹಾವಿದ್ಯಾಲಯ ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ, ಹಗರಿ, ಕೃಷಿ ತಾಂತ್ರಿಕ ಮಹಾವಿದ್ಯಾಲಯ ರಾಯಚೂರು ಹಾಗೂ ರಾಯಚೂರಿನ ಕೃಷಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನೊಳಗೊಂಡಂತೆ 320 ವಿದ್ಯಾರ್ಥಿಯರು ಹಾಗೂ 200 ವಿದ್ಯಾರ್ಥಿನಿಯರು ಭಾಗವಹಿಸುವರು.
ಈ ಕ್ರೀಡಾಕೂಟವನ್ನು ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸುತ್ತಿದೆ ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *