ಕವಿತಾಳ ಪಟ್ಟಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿಕೋಶ ರಾಯಚೂರು ಹಾಗೂ ಪಟ್ಟಣ ಪಂಚಾಯತಿ ಕವಿತಾಳ ಇವರ ಸಹಹೋಗದಲ್ಲಿ ಸ್ವಚ್ಛತೆಯೇ ಸೇವೆ-೨೦೨೫ ಸ್ವಚ್ಛತಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ರ‍್ಯಾಲಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಖಾಸಿಂಬೀ ಚಾಂದಪಾಷಾ ಅವರು ಚಾಲನೆ ನೀಡಿದರು, ರ‍್ಯಾಲಿಯು ಸರ್ಕಾರಿ ಪ್ರೌಢ ಶಾಲೆಯಿಂದ ಪ್ರಾರಂಭವಾಗಿ ಮುಖ್ಯ ರಸ್ತೆಯ ಮುಲಕ ಸಂತೆ ಬಜಾರ್, ಆನ್ವರಿ ರಸ್ತೆಯಿಂದ ಮರಳಿ ಶಾಲಾ ಆವರಣಕ್ಕೆ ಬಂದು ಸೆರಿತು ಈ ರ‍್ಯಾಲಿಯಲ್ಲಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮತ್ತು ಬಾಲಕರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪಟ್ಟಣ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಪಾಲ್ಗೋಂಡಿದ್ದರು.
ಪಟ್ಟಣ ಪಂಚಾಯತಿಯಲ್ಲಿ ನಶಾಮುಕ್ತ ಭಾರತ ಪ್ರತಿಜ್ಞಾ ವಿಧಿ ಬೋಧಿಸುವುದರ ಜೊತೆಗೆ ಸ್ವಚ್ಛತಾ ಅಭಿಯಾನಕ್ಕೆ ಪ್ರೋತ್ಸಾಹಿಸುವಂತೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು.
ನಂತರ ಮುಖ್ಯಾಧಿಕಾರಿ ಜಸ್‌ಪಾಲ್ ಸಿಂಗ್ ಮಾತನಾಡಿ` ಪಟ್ಟಣದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು’ ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ, ಉಪಾದಕ್ಷೆ ಸೇರಿದಂತೆ ಸದಸ್ಯರು, ವಿವಿಧ ಪಕ್ಷ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು
