ಮಸ್ಕಿ: ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರು ಮತ್ತು ಪಿಪಿಎಚ್‌ಎಫ್, ಪ್ರಣಾ ಯೋಜನೆ ,ಜಿಇ ಹೆಲ್ತ್‌ಕೇರ್ ಸಂಯುಕ್ತಾಶ್ರಯದಲ್ಲಿ ಜಂಟಿಯಾಗಿ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರವನ್ನು ಡಾ.ದೌಲಸಾಬ್ ಆಯುಶ್ ವೈದ್ಯಾಧಿಕಾರಿ ಬುಧವಾರ ಉದ್ಘಾಟಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಶ್ ವೈದ್ಯಾಧಿಕಾರಿ ಡಾ.ದೌಲಸಾಬ್ ಉದ್ಘಾಟಿಸಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮವಾದ ಪೀಪಲ್ ಟು ಪೀಪಲ್ ಹೆಲ್ತ್ ಫೌಂಡೇಶನ್ ಜಿ ಇ ಹೆಲ್ತ್ ಕೇರ್ ಇವರ ಸಂಯುಕ್ತಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಬಿಪಿ ಶುಗರ್ ತಪಾಸಣೆ, ಎಚ್ ಬಿ ತಪಾಸಣೆ, ಕಣ್ಣು ತಪಾಸಣೆ, ಹಲ್ಲು ತಪಾಸಣೆ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ, ಸ್ತ್ರೀ ರೋಗ ತಜ್ಞರಿಂದ ಮಹಿಳಾ ತಪಾಸಣೆ, ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಆಪ್ತ ಸಮಾಲೋಚನೆ, ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಉಚಿತವಾಗಿ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಒಂದು ಕಾರ್ಯಕ್ರಮದ ಸದುಪಯೋಗವನ್ನು ಪಡೆದು ಉತ್ತಮ ಸಮಾಜ ಕಟ್ಟಬೇಕು ಎಂದು ತಿಳಿಸಿದರು,
ನಂತರ ಪೀಪಲ್ ಟು ಪೀಪಲ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಮಲೈಕಾ ಅಮೀನ ಇವರು ಮಾತನಾಡಿ ಕಳೇದ ಒಂದು ವರ್ಷದಿಂದ ನಮ್ಮ ಸಂಸ್ಥೆಯಿಂದ ಇಂತಹ ಆರೋಗ್ಯ ಕೇಂದ್ರಗಳ ಮೂಲಕ ಮಹಿಳಾ ಕ್ಷೇಮಾ ತಪಾಸಣೆ ಶಿಬಿರ ಕೈಗೊಂಡು ಮಹಿಳೆಯರಿಗೆ ಎಲ್ಲಾ ಪರೀಕ್ಷೆಗಳು ಉಚಿತವಾಗಿ ನೀಡಿದ್ದೇವೆ. ಇದರಲ್ಲಿ ನುರಿತ ಮಹಿಳಾ ವೈದ್ಯರಿಂದ ಆರೋಗ್ಯ ತಪಾಸಣೆ, ಬಾಯಿ ಕ್ಯಾನ್ಸರ್ ತಪಾಸಣೆ, ಬಿಪಿ, ಸಕ್ಕರೆ ತಪಾಸಣೆ, ಕಣ್ಣು ತಪಾಸಣೆ, ಎಚ್‌ಬಿ ಪರೀಕ್ಷೆ, ಎಲ್‌ಎಫ್‌ಟಿ/ಆರ್‌ಎಫ್‌ಟಿ, ಎಚ್‌ಬಿಎ1ಸಿ ತಪಾಸಣೆ, ಮಾನಸಿಕ ಆರೋಗ್ಯ ಸಲಹೆಗಾರರಿಂದ ಮಾಹಿತಿ ಮತ್ತು ಸಲಹೆ ,ಉಚಿತ ಅಭಾ ಕಾರ್ಡ್ ನೋಂದಣಿ ಮತ್ತು ಮಹಿಳೆಯರಿಗೆ ಪೌಷ್ಟಿಕ ಆಹಾರದ ಕುರಿತು ಗ್ರಾಮಸ್ಥರಿಗೆ ಸಲಹೆ ನೀಡಿ ಮಹೆಂದಿ ಬಿಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ವೈದ್ಯೆ ಅಪೇಕ್ಷ,ಸುವರ್ಣ , ಡಾ.ಸುನೀಲ್, ದಂತ ವೈದ್ಯೆ ನವನೀತ ಗಬ್ಬೂರ್, ಕಣ್ಣು ವೈದ್ಯೆರು ,ಮಂಜು ಸಿಹೆಚ್ಒ ಹನುಮೇಶ ಸಿಹೆಚ್ಒ ಜಯಶ್ರೀ ಸಿಎಚ್ಒ,ಶರಣೆಗೌಡ ಸಿಹೆಚ್ಒ ರಾಜೇಶ್ವರಿ ಹೆಚ್ಐಒ,ವೆಂಕಟೇಶ ಕುಲ್ಕರ್ಣಿ ,ಪಿಪಿಎಚ್‌ಎಫ್ ಸಿಬ್ಬಂದಿ ಆಶಾ ಕಾರ್ಯಕರ್ತರು ,ಸ್ವಯಂ ಸೇವಕರು ಮತ್ತು ನೂರಾರು ಜನರು ಶಿಬಿರದಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.


