ಮಸ್ಕಿ : ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮಾದಾರ ಚೆನ್ನಯ್ಯನವರ 956ನೇ ಜಯಂತಿ ಆಚರಣೆ ಗುರುವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದೊಡ್ಡಪ್ಪ ಮುರಾರಿ ಮಾತನಾಡಿ ಮಾದಾರ ಚೆನ್ನಯ್ಯ ಅವರು 12ನೇ ಶತಮಾನದ ಪ್ರಮುಖ ಶರಣರಾಗಿದ್ದರು. ಬಸವಣ್ಣನವರ ಮೆಚ್ಚಿನ ಶರಣರಲ್ಲಿ ಚೆನ್ನಯ್ಯ ಕೂಡ ಒಬ್ಬರು’ ಎಂದು
ಹೇಳಿದರು.ನಂತರ ಮಲ್ಲಯ್ಯ ಬಳ್ಳಾ ಮಾತನಾಡಿ ಚೆನ್ನಯ್ಯನವರು ಅನನ್ಯ ವಚನಕಾರರು. ಬಸವಣ್ಣನವರು ಮಾದಾರನೆಂಬೆನೆ ಚೆನ್ನಯ್ಯನ, ಡೋಹಾರನೆಂಬೆನೆ ಕಕ್ಕಯ್ಯನ ಎಂದು ಚೆನ್ನಯ್ಯನವರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದರು’ ಎಂದು
ವಿವರಿಸಿದರು.
ನಂತರ ಪುರಸಭೆಯ ಸದಸ್ಯ ಮೌನೇಶ ಮುರಾರಿ ಮಾತನಾಡಿ
ಬಸವಣ್ಣ ತಮ್ಮ ವಚನದಲ್ಲಿ ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಕೂಡಲ ಸಂಗಮದೇವನ ಸಾಕ್ಷಿಯಾಗಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಮಾದಾರ ಚೆನ್ನಯ್ಯನ ಮನೆ ಅಂಬಲಿಯನ್ನುಂಡು ಬೆಳೆದೆನೆಂದು ಹೇಳುತ್ತಾರೆ’ಅಂತಹ ಚೆನ್ನಯ್ಯ ನಮ್ಮ ಕುಲತಿಲಕ. ಅವರನ್ನು ನಾವು ನಿತ್ಯವೂ ಸ್ಮರಿಸಬೇಕು. ಬಸವಾದಿ ಶರಣರ ವಚನಗಳನ್ನು ನಿತ್ಯ ಓದಿ ಅವುಗಳನ್ನು ನಮ್ಮ ಬದುಕಿನಲ್ಲಿಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ಮಲ್ಲಯ್ಯ ಮುರಾರಿ, ಸಿದ್ರಾಮಪ್ಪ ಕೊಠಾರಿ ಮುದುಕಪ್ಪ ದಾಸರ, ಕಾಶೀಮಪ್ಪ ಡಿ ಮುರಾರಿ, ದುರುಗಪ್ಪ ಮುರಾರಿ, ಚಂದ್ರಕಾಂತ್ ಮುರಾರಿ, ಅಶೋಕ್ ಮುರಾರಿ, ಪ್ರಶಾಂತ್ ದಾನಪ್ಪ, ಗಂಗಾಧರ್ ಮುರಾರಿ, ಕಿರಣ್ ವಿ ಮುರಾರಿ, ಪ್ರಶಾಂತ್ ಕೊಠಾರಿ ಸೇರಿದಂತೆ ಸಮಾಜದ ಇನ್ನಿತರ ಮುಖಂಡರು ಇದ್ದರು.

Leave a Reply

Your email address will not be published. Required fields are marked *