ದೇವದುರ್ಗ : ಮಾ 3 ತಾಲೂಕಿನ ಮುದುಗೋಟ್ ಗ್ರಾಮದಲ್ಲಿ ಗಂಭೀರ ಭೂ ಒತ್ತುವರಿ ಪ್ರಕರಣ ಬೆಳಕಿಗೆ ಬಂದಿದೆ. ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಮುದುಗೂಟ ಗ್ರಾಮದ ಚಪ್ಪಳಕಿ ಸೀಮಾಂತರದಲ್ಲಿರುವ ಸರ್ವೆ ನಂ. 89 ಸರಕಾರಿ ಗೈರಾಣಿ ಭೂಮಿಯಾಗಿದ್ದು, ಈ ಜಮೀನನ್ನು ಗ್ರಾಮದ ದನ-ಕರುಗಳಿಗೆ ಮೀಸಲಿಟ್ಟಿದ್ದರೂ ಅಕ್ರಮವಾಗಿ ಮರo ಸಾಗಾಟ ಮತ್ತು ಜಮೀನು ಒತ್ತುವರಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಮಾನ್ಯ ಸಹಾಯಕ ಆಯುಕ್ತರು, ರಾಯಚೂರು ಅವರು ಆದೇಶ ಸಂಖ್ಯೆ ಹಕ್ಕು /3-87-88 ದಿನಾಂಕ 23-03-1989ರಂತೆ ಮಂಜೂರಾದ ಸಾಗುವಳಿ ಚೀಟಿಯನ್ನು ರದ್ದುಪಡಿಸಲು ಸ್ಪಷ್ಟ ಆದೇಶ ನೀಡಿದ್ದರು. ಆದಾಗ್ಯೂ, ಈ ಆದೇಶವನ್ನು ಪಾಣಿ ಪತ್ರಿಕೆ (ಕಾಲಂ 9 ಮತ್ತು 12) ಯಲ್ಲಿ ಗೈರಾಣಿ ಎಂದು ದಾಖಲಿಸುವಂತೆ 02-07-2021ರಂದು ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಿಲ್ಲ ಎಂದು ಆರೋಪಿಸಲಾಗಿದೆ. ಕೂಡಲೇ ಸರ್ವೇ ನಂಬರ್ 89 ರಲ್ಲಿ ಸರ್ಕಾರಿ ಜಮೀನನ್ನು ಅಳತೆ ಮಾಡಿ ಹದ್ದುಬಸ್ತು ಮಾಡಿ ಸರ್ಕಾರಿ ಗೈರಾಣಿ ಜಮೀನು ಉಳಿಸಬೇಕೆಂದು ಒತ್ತಾಯ
ಗ್ರಾಮಸ್ಥರ ಆರೋಪ
ಎಂ.ಎಸ್. ಪಾಟೀಲ್ (ಗ್ರಾಮ ಪಂಚಾಯತ್ ಸದಸ್ಯರು) ಮಾತನಾಡಿ,
“ಸರ್ಕಾರಿ ಗೈರಾಣಿ ಜಮೀನನ್ನು ಹದ್ದುಬಸ್ತು ಮಾಡಲು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಜಮೀನನ್ನು ಉಳಿಸಬೇಕು” ಎಂದು ಒತ್ತಾಯಿಸಿದರು.
ಕೃಷ್ಣಪ್ಪ ದೊರೆ ಮಾತನಾಡಿ,
“ಸರ್ವೆ ನಂ. 89ರಲ್ಲಿ ಚೆಕ್‌ಬಂದಿ ಇಲ್ಲ, ಫಾರಂ ನಂ. 10 ಇಲ್ಲ, ನಕ್ಷೆ ಇಲ್ಲ, ಸರಿಯಾದ ಅಳತೆ ಮಾಡಿಲ್ಲ. ಒಂದು ಎಕರೆ ಜಮೀನು ಹೊಂದಿರುವವರು ನಾಲ್ಕು ಎಕರೆಗೂ ಹೆಚ್ಚು ಒತ್ತುವರಿ ಮಾಡಿದ್ದಾರೆ. ಇದಕ್ಕೆ ಕಂದಾಯ ನಿರೀಕ್ಷಕ ದೇವರೆಡ್ಡಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ನಿರ್ಲಕ್ಷವೇ ಕಾರಣ” ಎಂದು ಆರೋಪಿಸಿದರು.
ಗ್ರಾಮಸ್ಥರು ಈಗಾಗಲೇ ಲೋಕಾಯುಕ್ತ ಇಲಾಖೆ, ಬೆಂಗಳೂರು ಅವರಿಗೆ ಪತ್ರದ ಮೂಲಕ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಮಾನ್ಯ ತಹಸೀಲ್ದಾರರು ಕಂದಾಯ ನಿರೀಕ್ಷಕರಾದ ದೇವಿ ರೆಡ್ಡಿ ಹಾಗೂ ಗ್ರಾಮಲೆಕ್ಕಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಕೂಡಲೇ ಅಕ್ರಮವಾಗಿ ಮರಂ ಒಡೆಯುವ ಕಾರ್ಯನಿಲ್ಲಬೇಕು.ಹೆಗ್ಗಿಲ್ಲದೆ ಜೆಸಿಬಿ ಟಿಪ್ಪರ್ಗಳಿಂದ ಮರಂಸಾಗಟ ನಡೆಯುತ್ತಿದೆ ತಕ್ಷಣದಿಂದ ನಿಲ್ಲಿಸಬೇಕು.
ಇಲ್ಲವಾದರೆ ದನ-ಕರುಗಳ ಸಮೇತ ತಹಸೀಲ್ದಾರ್ ಕಚೇರಿ ಮುಂದೆ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಹಾಜರಿದ್ದವರು:
ಕೃಷ್ಣಪ್ಪ ದೊರೆ,
ಎಂ.ಎಸ್. ಪಾಟೀಲ್ (ಗ್ರಾಮ ಪಂಚಾಯತ್ ಸದಸ್ಯರು),
ಗೋವಿಂದರಾಜ ದೊರೆ,
ಅಪ್ಪು ಪಾಟೀಲ್,
ಆರ್.ಎಸ್. ಪಟೇಲ್,
ದೇವಪ್ಪಗೌಡ ಮೇಟಿ,
ಹಂಪಣ್ಣ ತಪಾಸಿ,
ಚೆನ್ನಪ್ಪ ಮುದುಗೋಟ್,
ಸಾಬಣ್ಣ ಮೇಟಿ ಗೌಡ,
ತಿಮ್ಮಣ್ಣ ತಳವಾರ್,
ಚೆನ್ನಪ್ಪ ದಳಪತಿ,
ಚಂದ್ರು ಪಾಟೀಲ್,
ಸಿದ್ದಪ್ಪ ತಳವಾರ್,
ಚಂದ್ರಮ ಆಂಜನೇಯ ಮೇಟಿ,
ನಾಗಪ್ಪ ಮೇಟಿ,
ಈರಣ್ಣ ಮೇಟಿ,
ಮಂಜುನಾಥ್ ಮೇಟಿ,
ಕಾಶಿನಾಥ್ ಮೇಟಿ,
ಚನ್ನಬಸವ ಮೇಟಿ,
ಬಸವರಾಜ್ ದೊರೆ,
ರಂಗನಾಥ ದೊರೆ,
ಹನುಮಂತರಾಯಗೌಡ ಆಲದಾಳ ಹಾಗೂ ಮುದುಗೋಟ್ ಗ್ರಾಮದ ಇತರ ಗ್ರಾಮಸ್ಥರು.


