ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿ ಮೊದಲಿನಂತೆ ಸಾರಿಗೆ ಬಸ್ ನಿಲುಗಡೆ ಮಾಡಬೇಕು, ಇದರಿಂದ ಜನರಿಗೆ ಬಹಳಷ್ಟು ತೊಂದರೆ ಆಗಿದೆ ಈ ಹಿಂದೆ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ, ಹಳೆ ಬಸ್ ನಿಲ್ದಾಣದಲ್ಲಿ ಬಸ್ ಗಳು ನಿಲ್ಲುತ್ತಲ್ಲ ಇದರಿಂದಾಗಿ ಮಕ್ಕಳು, ಮಹಿಳೆಯರು, ಅಂಗವಿಕಲರು ಹಾಗೂ ವಯೋವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದ್ದು, ಅದಕ್ಕಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಹಳೆ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮಸ್ಕಿ ಶಾಸಕ ಆರ್ ಬಸನಗೌಡ ತುರುವಿಹಾಳ ಅವರಿಗೆ, ತಹಸೀಲ್ದಾರ್ ಅವರಿಗೆ, ಪುರಸಭಾ ಅಧ್ಯಕ್ಷರಿಗೆ, ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷರು ಆರ್ ಕೆ ನಾಯಕ, ಮಹೇಶ್ ನಂದಿಹಾಳ,ಬಸವರಾಜ ಬಾಳೇಕಾಯಿ, ಸಂತೋಷ್ ಬಳೆಗಾರ,ಕೇಶವ್ ಮೂರ್ತಿ ದಾಸರ, ಉಮಣ್ಣ ಹಳ್ಳಿ,ಮಲ್ಲಯ್ಯ ಬರಕೇರ್,
ಬಸವರಾಜ್ ಸಜ್ಜನ್ ಹಾಗೂ ಇತರರು ಇದ್ದರು.

