ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಂ.4 ಕಾಲುವೆ ಉಪವಿಭಾಗ ಹಿರೇಕೊಟ್ನೆಕಲ್ ಕಚೇರಿ ಆವರಣದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಹಾಯಕ ಅಭಿಯಂತರರಾದ ಲಕ್ಷಿö್ಮÃರವರ ಮೂಲಕ ಮನವಿ ಸಲ್ಲಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ ಎ.ಐ.ಸಿ.ಸಿ.ಟಿ.ಯು ಉಪ ವಿಭಾಗದ ಸಮಿತಿಯಿಂದ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಉಪ ವಿಭಾಗದ ಅಧ್ಯಕ್ಷ ವೆಂಕಟೇಶ್ ಕೋರಿ ಮಾತನಾಡಿ ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ನೀಡಬೇಕು, ಸರ್ಕಾರದ ನಿರ್ದೇಶನದಂತೆ ವರ್ಷಪೂರ್ತಿ ಕೆಲಸ ನೀಡಬೇಕು,ಕಾರ್ಮಿಕರ ವೇತನ, ಪಿಎಫ್, ಇ.ಎಸ್.ಐ. ಪಾವತಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ಪಾವತಿಗೆ ಶಿಫಾರಸು ಮಾಡಬೇಕು ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ನೀರು ನಿಂತ ನಂತರವು ಕೆಲಸದಲ್ಲಿ ಮುಂದುವರೆಸಬೇಕು.ಯರಮರಸ್ ವೃತ್ತದ ಸಿಂಧನೂರು, ಸಿರಿವಾರ ಮತ್ತು ಯರಮರಸ್ ವಿಭಾಗದ ಎಲ್ಲಾ ಉಪ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಜೂನ್ ತಿಂಗಳಿAದ ವೇತನ ಪಾವತಿಯಾಗದೆ ಇರುವುದರಿಂದ ತಕ್ಷಣವೇ ಬಾಕಿ ವೇತನ, ಪಿಎಫ್, ಇ.ಎಸ್.ಐ. ಪಾವತಿಗೆ ಕ್ರಮ ವಹಿಸಬೇಕು. ಏಪ್ರಿಲ್ ತಿಂಗಳಿನಿAದ ಕಾರ್ಮಿಕರ ತುಟ್ಟಿ ಭತ್ಯೆ ಹೆಚ್ಚಾಳವಾಗಿದ್ದು ತಕ್ಷಣ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು.ಟೆಂಡರ್ ಪಡೆದ ಗುತ್ತೇದಾರರು ಗುತ್ತಿಗೆ ಒಪ್ಪಂದದAತೆ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ, ಪಿಎಫ್, ಇ.ಎಸ್.ಐ.,ಪಾವತಿಸದ ಗುತ್ತಿಗೆದಾರರನ್ನು ಗುತ್ತಿಗೆ ಒಪ್ಪಂದ ತಕ್ಷಣ ರದ್ದುಪಡಿಸಿ ಗುತ್ತೇದಾರರ ಲೈಸೆನ್ಸ್ ಕಪ್ಪು ಪಟ್ಟಿಗೆ ಸೇರಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ಪಾವತಿಗೆ ಶಿಫಾರಸು ಮಾಡಬೇಕು. ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸಮವಸ್ತ್ರ, ಐಡಿ ಕಾರ್ಡ್ ಸೇರಿದಂತೆ ಮೂಲ ಸೌಕರ್ಯ ನೀಡಬೇಕು. ಕಾನೂನು ಬಾಹಿರವಾಗಿ 26 ದಿನಗಳ ವೇತನ ಪಾವತಿ ಮಾಡುವುದನ್ನು ತಕ್ಷಣ ನಿಲ್ಲಿಸಿ.ಕಚೇರಿ ಮತ್ತು ಕ್ಯಾಂಪ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಿಂಗಳಪೂರ್ತಿ ವೇತನ ಪಾವತಿ ಮಾಡಬೇಕು. ಕಾರ್ಮಿಕರಿಗೆ ಉದ್ಯೋಗದ ಭದ್ರತೆ ನೀಡುವ ಮೂಲಕ ಕಾರ್ಮಿಕ ಕುಟುಂಬಗಳನ್ನು ಗೌರವದಿಂದ ಬದುಕಲು ಅವಕಾಶ ಮಾಡಿಕೋಬೇಕು. ಎಂದು ಒತ್ತಾಯಿಸಿದರು.
ಬಸವರಾಜ್ ಸಾಲಮನಿ , ಶಂಕರ್ ಜಾನೇಕಲ್, ಮಸೂದ್ ಕವಿತಾಳ, ನಾಗಪ್ಪ ಜಾನೇಕಲ್, ಅಮರೇಶ್ ಕರಿಗುಡ್ಡ, ಲಾಳೆ ಸಾಬ್, ಸ್ವಾಮಿ ಕರೆಗುಡ್ಡ, ವೀರೇಶ್ ಬಾಗಲವಾಡ, ರಾಮ ಮಲ್ಲದಗುಡ್ಡ, ದೇವಪ್ಪ, ತಿರುಪತಿ ಸೇರಿದಂತೆ ಹಿರೇಕೊಟ್ನೆಕಲ್ ಉಪ ವಿಭಾಗದ ಕಾರ್ಮಿಕರು ಇದ್ದರು.
3-ಮಾನ್ವಿ-5:
ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯ ಆವರಣದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದಿAದ ಮನವಿ ಸಲ್ಲಿಸಲಾಯಿತು.

