ಸಿಂಧನೂರು : ಎಫ್.ಆರ್.ಸಿ.ಎಸ್. ಕ್ಲಬ್, ಸಿಂಧನೂರನಲ್ಲಿ
ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ) ಬೆಂಗಳೂರು, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ರಾಯಚೂರು. ಆರ್.ಜಿ.ಎಂ. ಪದವಿ ಪೂರ್ವ ಕಾಲೇಜು, ಆಕ್ಸ್‌ಫರ್ಡ್ ಪದವಿ ಪೂರ್ವ ಕಾಲೇಜು, ಎಫ್.ಆರ್.ಸಿ.ಎಸ್ ಕ್ಲಬ್ ಸಿಂಧನೂರು, ಸಿಂಧನೂರು ತಾಲೂಕ ಸರಕಾರಿ ಮತ್ತು ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳು ಸಿಂಧನೂರು ಇವರುಗಳ ಸಂಯುಕ್ತಾಶ್ರಯದಲ್ಲಿ
2025-2026ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಲಾನ್ ಟೆನ್ನಿಸ್ ಪಂದ್ಯಾವಳಿಗಳ ಉದ್ಘಾಟನೆಯನ್ನು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದರು ಕೆ ವಿರುಪಾಕ್ಷಪ್ಪನವರು ಲಾಲ್ ಟೆನಿಸ್ ಆಡುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು…
ನಂತರ ಮಾತನಾಡಿದ ಶಾಸಕರು ,ಶಿಕ್ಷಕರು ಮಕ್ಕಳಿಗೆ ಪಠ್ಯವಷ್ಟೇ ಆಸಕ್ತಿ ಬೆಳೆದೇ ಕ್ರೀಡೆಯಲ್ಲೂ ಸಾಧಕರನ್ನಾಗಿ ಸಬೇಕು,” ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು
ಮಕ್ಕಳಿಗೆ ಕ್ರೀಡೆಗಳಿಗೆ ಸಾಕಷ್ಟು ತರಬೇತಿ ಮತ್ತು ಪಂದ್ಯಗಳಲ್ಲಿಭಾಗವಹಿಸುವ ಅವಕಾಶ ನೀಡಬೇಕು. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕಾರಣ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕಾರಣವಾಗುತ್ತದೆ ಎಂದರು..
ಶಾಲಾ ಶಿಕ್ಷಣ ಇಲಾಖೆ ಕಾಲೇಜು
ವಿಭಾಗದ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ಮಾತನಾಡಿ, ‘ಸಿಂಧನೂರಿನ ಟೆನಿಸ್ ಕ್ಲಬ್ ರಾಜ್ಯದ ಗಮನಸೆಳೆದಿದೆ. ರಾಷ್ಟ್ರಮಟ್ಟದ ಸಿಂಧನೂರಿನಲ್ಲಿ ಆಯೋಜಿಸುವ ಚಿಂತನೆ ನಡೆದಿದೆ. ನಾವು ಹಿಂದುಳಿದ ಜಿಲ್ಲೆಯಲ್ಲಿದ್ದೇವೆ ಎಂಬ ಭಾವನೆ ಈಗಿಲ್ಲ, ಕಾಲ ಬದಲಾದಂತೆ ಬದಲಾವಣೆ ಆಗುತ್ತಿದೆ,” ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು.ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರೀಡೆಗಳ ಪ್ರಾಮುಖ್ಯತೆ ಬಹಳ ಮುಖ್ಯ ಏಕೆಂದರೆ ಶಿಕ್ಷಣದಲ್ಲಿ ಕ್ರೀಡೆಗಳ ಮಹತ್ವ ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಬೆಳೆಸುವಲ್ಲಿ ಕ್ರೀಡೆ ಮತ್ತು ವ್ಯಾಯಾಮವು ಪ್ರಬಲ ಸಾಧನವಾಗಿದೆ..ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅವರ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಕ್ರೀಡೆ ಆರೋಗ್ಯಕರ ಮೂಳೆಗಳು ಮತ್ತು ಸ್ನಾಯುಗಳನ್ನು ನಿರ್ಮಿಸುತ್ತದೆ, ಫಿಟ್ನೆಸ್ ಅನ್ನು ಹೆಚ್ಚಿಸುತ್ತದೆ, ನಿದ್ರೆಯನ್ನು ಸುಧಾರಿಸುತ್ತದೆ ಮತ್ತು ಅವರು ಬೆರೆಯಲು ಸಹಾಯ ಮಾಡುತ್ತದೆ.ಕ್ರೀಡೆಗಳನ್ನು ಆಡುವುದರಿಂದ ಮಗುವಿನ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ
ಎಆರ್.ಸಿಎಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ಆರ್‌ಜಿಎಂ ಶಿಕ್ಷಣ ಸಂಸ್ಥೆ ಕಾರ್ಯ ದರ್ಶಿ ಆರ್ .ಪದ್ಮನಾಭ್, ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಷ್ಟಿ, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ತಾ.ಪಂ. ಇಒ ಚಂದ್ರಶೇಖರ, ಕ್ರೀಡಾ ಸಹಾಯಕ ನಿರ್ದೇಶಕ ಡಾ.ಗುಬ್ಬಿಗೂಡು ರಮೇಶ, ಜಿಲ್ಲಾ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಡಾ.ಶಿವರಾಜ ಎಸ್.. ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯ ಆರ್.ಅನಿಲಕುಮಾರ , ಸಿಂಧನೂರು ತಾಲೂಕ ಸರ್ಕಾರಿ ಮತ್ತು ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳು ಹಾಗೂ ಇತರರಿದ್ದರು.

