ಲಿಂಗಸುಗೂರು : ಮಹಿಳೆಯರ ಜೀವನದಲ್ಲಿ ಹಲವು ಪಾತ್ರಗಳನ್ನು ನಿಭಾಯಿಸುವ ಮೂಲಕ ಸಮಾಜದ ಸ್ಪೂರ್ತಿಯಾಗಿದ್ದು, ಕುಟುಂಬದ ಜವಬ್ದಾರಿ ಹೊತ್ತು ಸಂಸಾರ ನಿರ್ವಹಣೆಯಲ್ಲಿ ಅತಿಮುಖ್ಯ ಪಾತ್ರ ವಹಿಸುರುತ್ತಾಳೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಆರ್ ಎಂ ಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ನೂತನ ಗಾರ್ಮೆಂಟ್ಸ ಸ್ಥಾಪನೆಗೆ ಚಾಲನೆ ಹಾಗೂ ಹೊಲಿಗೆ ಮತ್ತು ಬ್ಯೂಟಿಷಿಯನ್ ಕಲಿಕಾರ್ಥಿಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಮುಖ್ಯಸ್ಥೆ ಹಾಗೂ ತರಬೇತಿದಾರರಾದ ಪವಿತ್ರ ಹೂಗಾರ ಅವರು 120 ಮಹಿಳೆಯರಿಗೆ ತರಬೇತಿ ನೀಡಿ ಉದ್ಯೋಗ ಅವಕಾಶ ಕಲ್ಪಿಸುವ ಕಾರ್ಯ ಶ್ಲಾಘನೀಯವಾಗಿದ್ದು ಇಂತಹ ಕೆಲಸಕ್ಕೆ ಸದಾ ನಮ್ಮ ಬೆಂಬಲ ಇರುತ್ತದೆ, ಚುನಾವಣೆ ಸಂದರ್ಭದಲ್ಲಿ ನಾನೇ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದೆ, ಮಹಿಳೆಯರಿಗೆ ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕನಿಷ್ಠ 2 ಸಾವಿರ ಮಹಿಳೆಯರ ಉದ್ಯೋಗ ಸೃಷ್ಟಿಸಲು ಗಾರ್ಮೆಂಟ ಮಾಡುವದಾಗಿ ಹೇಳಿದ್ದೆ ಆದರೆ ನಮ್ಮ ತಾಲೂಕಿನ ಮಹಿಳೆಯರಿಗೆ ಅನುಕೂಲ ಆಗುವ ಉದ್ಯೋಗ ಅವಕಾಶ ದೊರೆಯುವಂತಹ ಕೆಲಸ ಮಾಡಿದ ಪವಿತ್ರ ಹೂಗಾರ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಭಿ ಬದುಕು ಸಾಗಿಸಲು ದಾರಿದೀಪವಾಗಲಿ ಎಂದರು, ಇಂದಿನ ಸ್ರರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಮಹಿಳೆ ಪುರುಷರಿಗೆ ಸಮಾನವಾಗಿ ಉನ್ನತ ಹುದ್ದೆ ಹಾಗೂ ಪದವಿಯನ್ನು ಪಡೆದು ಸಮರ್ಥವಾಗಿ ನಿಭಾಯಿಸಿ ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆ ಸಾರಿದ ಮಹಿಳೆಯರು ಮುಂದಿನ ದಿನಗಳಲ್ಲಿ 33 ಪರ್ಸೆಂಟ ಮೀಸಲಾತಿ ಜಾರಿಯಾದರೆ ಮಹಿಳೆಯರಿಗೆ ಅಧಿಕಾರ ಅಡುಗೆ ಮನೆಗೆ ಹುಡುಕಿಕೊಂಡು ಬರಲಿದೆ ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಮುರುಘರಾಜೇಂದ್ರ ಸ್ವಾಮೀಜಿಗಳು ಸಿದ್ದರಾಮೇಶ್ವರ ಗುರುಮಠ ಯರಡೋಣಿ, ಹಾಗೂ ಸಿದ್ದಲಿಂಗ ಮಹಾಸ್ವಾಮಿಗಳು ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾಮಠ ಲಿಂಗಸಗೂರು, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ, ಡಾ.ರುದ್ರಗೌಡ ಪಾಟೀಲ, ಎಂ.ಪಿ ಸದಾನಂದ ನಿರ್ದೇಶಕರ ಜನ ಶಿಕ್ಷಣ ಸಂಸ್ಥೆ ರಾಯಚೂರ, ಮಾಜಿ ಪುರಸಭೆ ಅಧ್ಯಕ್ಷೆ ಸುನಿತಾ ಪರಶುರಾಮ ಕೆಂಭಾವಿ, ಸಂಗಮೇಶ ವಸ್ತ್ರದ, ಪವಿತ್ರ ಹೂಗಾರ ಕಾರ್ಯಕ್ರಮ ಸಂಯೋಜಕರು, ಸೇರಿದಂತೆ ಅನೇಕ ಗಣ್ಯರು ಹಾಗೂ ಕಲಿಕಾರ್ಥಿಗಳು ಸೇರಿದಂತೆ ಇದ್ದರು.

