ಲಿಂಗಸುಗೂರು : ಮಾಜಿ ಶಾಸಕರು ಬಿಜೆಪಿ ಮೂಲದಿಂದ ಬಂದಿರುವವರನ್ನು ಪಕ್ಕಕ್ಕೆ ಇಟ್ಟುಕೊಂಡು, ಬಿಜೆಪಿ ಪಕ್ಷದಿಂದ ಬಂದವರಿಗೆ ಆದ್ಯತೆ ಕೊಟ್ಟಿದ್ದಾರೆ, ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ದಾಂತದ ಬಗ್ಗೆ ಗೊತ್ತಿಲ್ಲ, ನಮ್ಮ ಮೇಲೆ ಸುಳ್ಳು ಆಪಾದನೆ ಮಾಡುವುದನ್ನು ಬಿಡಬೇಕು ನಿಮಗೆ ನೈತಿಕತೆ ಇದ್ದರೆ ನೇರವಾಗಿ ಬನ್ನಿ ಒಂದೇ ವೇದಿಕೆಯಲ್ಲಿ ಸೇರಿ ಚರ್ಚಿಸಲು ನಾವುಗಳು ಸಿದ್ದರಾಗಿದ್ದೇವೆ ಎಂದು
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರೆಂದು ಹೇಳಿಕೊಳ್ಳುವ ಕೆಲವರು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾವುಗಳೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಆಗಿದ್ದೇವೆ ನಮಗೆ ಎಚ್ಚರಿಕೆ ಇದೆ. ಅದಕ್ಕಾಗಿಯೇ ಎಚ್ಚರಿಕೆಯಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ.
ಹೂಲಗೇರಿ ಸಂಘ ಬಿಟ್ಟಿದ್ದೇವೆ ಹೊರತು ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ : ಶಾಸಕ 2023ರ ಚುನಾವಣೆಯಲ್ಲಿ ನಾವುಗಳು ಅತ್ಯಂತ ಪ್ರಾಮಾಣಿಕತೆಯಿಂದ ದುಡಿದಿದ್ದೇವೆ. ಡಿ.ಎಸ್.ಹೂಲಗೇರಿಯವರ ಸಂಘ ಬಿಟ್ಟಿದ್ದೇವೆಯೇ ಹೊರತು ನಾವು ಕಾಂಗ್ರೆಸ್ ಪಕ್ಷವನ್ನು ಬಿಟ್ಟಿಲ್ಲ. ಪಕ್ಷದಲ್ಲಿಯೇ ಇದ್ದು ಸಂಘಟನೆಯಲ್ಲಿ ತೊಡಗಿದ್ದೇವೆ.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್ ಮಾತನಾಡಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರೆಂದು ಕೇಳಿಕೊಳ್ಳುವವರು ಪದೇ ಪದೇ ಬಯ್ಯಾಪೂರರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಅವರು ಕೊಡುವ ಎಚ್ಚರಿಕೆಗೆ ನಾವು ಡೊಂಟ್‌ಕೇರ್ ಎಂದು ಎಚ್ಚರಿಸಿದರು.
ಪಕ್ಷಕ್ಕೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದವರಿಗೆ ಗೌರವ ಸಿಗದೇ ಇರುವ ಸಂದರ್ಭದಲ್ಲಿ ಹೂಲಗೇರಿಯವರ ಸಂಘ ತೊರೆದು ಮಾಜಿ ಸಚಿವರ ಜೊತೆಗಿದ್ದೇವೆ. ಕಾಂಗ್ರೆಸ್ ಪದ ಮೂಲ ಕಾರ್ಯಕರ್ತರು ನಾವುಗಳು ಕ್ಷೇತ್ರದಲ್ಲಿ ಈ ಸಂಘಟನೆ ಕಾರ್ಯದಲ್ಲಿ ತೊಡಗಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಇದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವಲ್ಲಿ ನಿರತರಾಗಿದ್ದಾರೆ. ಬಿಜೆಪಿ ಆರ್‌ಎಎಸ್ ಮೂಲದಿಂದ ಬಂದವರು ಯಾವತ್ತೂ ಕಾಂಗ್ರೆಸ್ ತತ್ವ ಸಿದ್ಧಾಂತ. ಜಾತ್ಯಾತೀತ ಮನೋಭಾವನೆ ಹೊಂದಲು ಸಾಧ್ಯವಿಲ್ಲ, ನಾವು ಪಕ್ಷದ ಹಿರಿಯರ ನಿರ್ದೇಶನದಂತೆ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇವೆ ಎಂದರು.
ಮಿಸಲು ಎನ್ನುವುದು ಕೆಲ ಸಮಾಜಗಳಿಗೆ ರಾಜಕೀಯವಾಗಿ ನೀಡುವ ಪ್ರಾತಿನಿಧ್ಯವೇ ಹೊರತು. ಪಟ್ಟಾಭಿಷೇಕವಲ್ಲ, ಕೇವಲ ಮೀಸಲಿರುವವರೇ ನಿಮಗೆ ಮತ ಹಾಕಿದ್ದಾರೆಯೇ.? ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಮಾತನಾಡಬೇಕು. ಎ೦ದು ಹಿರಿಯ ಮುಖಂಡ ಡಿ.ಜಿ. ಗುರಿಕಾರ ಮಾತನಾಡಿದರು.
ಈ ಸಂದರ್ಭದಲ್ಲಿ ಗುಂಡಪ್ಪ ನಾಯಕ, ಅನೀಷಪಾಷ, ಮಲ್ಲಯ್ಯ, ಪ್ರಕಾಶ ಕುರಿ, ಜಗದೇಶ ಗೌಡ, ಶರಣಪ್ಪ ಹುನಕುಂಟಿ, ಈರಪ್ಪ ಸೇರಿದಂತೆ ಇದ್ದರು.

