ತ್ವರಿತಗತಿಯಲ್ಲಿ ಗೇಟ್ ಅಳವಡಿಸಲು ಸಚಿವ ಎನ್ಎಸ್ ಬೋಸರಾಜು ಸೂಚನೆ

ರೈತರಿಗೆ ತೊಂದರೆಯಾಗದಂತೆ ಜೂನ್ ಅಂತ್ಯದೊಳಗೆ ಗೇಟ್ ಗಳನ್ನು ಅಳವಡಿಸಿ- ಸಚಿವ ಎನ್ಎಸ್ ಬೋಸರಾಜು

ಮುನಿರಾಬಾದ್,
ನಿಗದಿತ ಸಮಯದೊಳಗೆ ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ ಗಳನ್ನು ಅಳವಡಿಸಿ ರೈತರಿಗೆ ತೊಂದರೆಯಾಗದಂತೆ ತುಂಗಭದ್ರ ಬೋರ್ಡ್ ಮಂಡಳಿ ಹಾಗೂ ಅಧಿಕಾರಿಗಳು ಜೂನ್ ಅಂತ್ಯದೊಳಗಾಗಿ ಗೇಟ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು‌.

ಮುನಿರಾಬಾದ್ ನಲ್ಲಿ ನಡೆದ ತುಂಗಭದ್ರ ಆಣೆಕಟ್ಟಿನ ಕ್ರಸ್ಟ ಗೇಟ್ ಅಳವಡಿಸುವ ಕುರಿತ ಅಧಿಕಾರಿಗಳೊಂದಿಗೆ ಸಚಿವ ಎನ್ಎಸ್ ಬೋಸರಾಜು ಅವರು ಸಭೆ ನಡೆಸಿದರು.

ಈಗಾಗಲೆ 15 ಗೇಟ್ ಗಳು ರಡಿಯಾಗಿವೆ ಆಂದ್ರ ಪ್ರದೇಶ ಸರ್ಕಾರ ಈಗಾಗಲೆ 20 ಕೋಟಿ ಬಿಡುಗಡೆಗೊಳಿಸಿದೆ, ಕರ್ನಾಟಕ ಸರ್ಕಾರದಿಂದ 10 ಕೋಟಿ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಉಳಿದ 18 ಗೇಟ್ ಗಳನ್ನು ಗುತ್ತೆದಾರರು ತಕ್ಷಣ ತಯ್ಯಾರು ಮಾಡಿ, ಜೂನ್ ಅಂತ್ಯದೊಳಗೆ ಎಲ್ಲಾ ಗೇಟ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಿದರು.

ಡಿಸೆಂಬರ್ 5 ರಂದು ಕ್ರಸ್ಟ ಗೇಟ್ ಮೇಲಿನ ಕ್ಯಾಪ್ ಗಳನ್ನು (ಮೇಲಿನ ಕವಚಗಳನ್ನು) ತೆಗೆಯುವ ಕೆಲಸ ಪ್ರಾರಂಬಿಸಲಾಗುವುದು, ಎಂದು ತಾಂತ್ರಿಕ ಅಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದರು.

ಆಂಧ್ರಪ್ರದೇಶ ನದಿ ಮುಖಾಂತರ ಸುಮಾರು 7 ಟಿಎಂಸಿಯಷ್ಟು ನೀರು ಹಾಗೂ ತೆಲಂಗಾಣಕ್ಕೆ 5 ಟಿಎಂಸಿ ನೀರು, ಒಟ್ಟಾರೆಯಾಗಿ 12 ಟಿಎಂಸಿ ನೀರು ನದಿ ಮುಕಾಂತರ ಹೊರ ಬಿಡಬೇಕಾಗಿದೆ ಈ ಕುರಿತು ತುಂಗಭದ್ರ ಬೋರ್ಡ್, ಆಂದ್ರ ಹಾಗೂ ತೆಲಂಗಾಣ ಸರ್ಕಾರದೊಂದಿಗೆ ಮಾತನಾಡಿ ನದಿ ಮುಖಾಂತರ ನೀರು ಬಿಡಲು ಕ್ರಮ ಕೈಗೊಳ್ಳಬೇಕು. ಗೇಟ್ ಗಳನ್ನು ಅಳವಡಿಸಲು ಮುಖ್ಯವಾಗಿ ಆಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು ಕಡಿತಗೊಳಿಸಬೇಕು ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ನಾಲೆಗಳ ದುರಸ್ತಿಗಾಗಿ ಹಣಕಾಸು ಇಲಾಖೆಗೆ ಹಣ ಮೀಸಲಿಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು. ಕ್ರಮೇಣವಾಗಿ ಗೇಟ್ ಜೊತೆಯಲ್ಲಿ ನಾಲೆಗಳ ದುರಸ್ತಿಗೂ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಅಲ್ಲದೆ ನಾಳೆ ಸಚಿವ ಎನ್ಎಸ್ ಬೋಸರಾಜು ಮತ್ತು ಶಿವರಾಜ ತಂಗಡಗಿ ಸೇರಿ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಸಂಬಂಧ ಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮಲ್ಲಿಕಾರ್ಜುನ್ ನಾಗಪ್ಪ, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಾದ ಲಕ್ಷ್ಮಣ ನಾಯಕ್, ಎಸ್ ಇ ಸತ್ಯನಾರಾಯಣ, ಶಾಂತರಾಜ್, ಇಇ ಗೋಡೆಕರ್, ಗಿರೀಶ್, ವಿಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡರಾದ ಶಾಂತಪ್ಪ ದೊಡ್ಡಬಸಪ್ಪ ಗೌಡ, ಅಮರೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *