ರಾಯಚೂರು: ಕಲಬುರಗಿ-ಬೆಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ. ಪ್ರಯಾಣಿಕರ ಕೋರಿಕೆ ಮೇರೆಗೆ ಸತ್ಯಸಾಯಿ ಪ್ರಶಾಂತಿ ನಿಲಯಂ (ಪುಟ್ಟಪರ್ತಿ)ನಲ್ಲಿ ನಿಲುಗಡೆಯಾಗಲಿದೆ.
ಬೆಳಿಗ್ಗೆ 6.10ಕ್ಕೆ ಕಲಬುರಗಿಯಿಂದ ಹೊರಡುವ ರೈಲು( ಸಂಖ್ಯೆ 22231) ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಸತ್ಯಸಾಯಿ ಪ್ರಶಾಂತಿ ನಿಲಯಂ, ಯಲಹಂಕ ಮೂಲಕ ಸಾಗಿ ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಮಧ್ಯಾಹ್ನ 2.40ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡುವ ರೈಲು(22232) ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ. ಈ ಮುಂಚೆ ರಾತ್ರಿ 11.30ಕ್ಕೆ ತಲಪುತ್ತಿತ್ತು
ಸೋಲಾಪೂರ –ಕಲಬುರಗಿ ಸೇವೆ ರದ್ದು
ರಾಯಚೂರು: ಸೋಲಾಪೂರ ಯಾರ್ಡ್ ಬ್ಲಾಕ್ ಆಗಿರುವ ಕಾರಣ ಕಲಬುರಗಿ – ಸೋಲಾಪೂರ ನಡುವಿನ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ.
ಡಿ.13 ರಂದು ಹಾಸನದಿಂದ ಹೊರಡುವ ಹಾಸನ-ಸೋಲಾಪೂರ ರೈಲು(ಸಂಖ್ಯೆ 11312 ) ಕಲಬುರಗಿಯವರೆಗೆ ಮಾತ್ರ ಸಂಚರಿಸಲಿದ್ದು, ಕಲಬುರಗಿ- ಸೋಲಾಪೂರ ನಡುವಿನ ಸೇವೆಗಳು ರದ್ದಾಗಿವೆ,. ಅದೇರೀತಿಯಾಗಿ ಸೋಲಾಪೂರ ಹಾಸನ ಎಕ್ಸ್ ಪ್ರೆಸ್ ರೈಲು ಡಿ.14 ರಂದು ಸೋಲಾಪೂರದಿಂದ ಹೊರಡಬೇಕಾಗಿದ್ದ ಸೋಲಾಪೂರ –ಹಾಸನ ಎಕ್ಸಪ್ರೆಸ್ ರೈಲು ( 11311) ಕಲಬುರಗಿಯಿಂದ ಹೊರಡಲಿದೆ ಎಂದು ಅವರು ಪತ್ರಿಕಾ ಹೇಳಕೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *