ನೈಜ್ಯ ದೆಸೆ : ಲಿಂಗಸಗೂರು ಡಿ. 3
ತಾಲೂಕ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಯವರು ತುಂಬಿದ ಸಭೆಯಲ್ಲಿ ಶಿಕ್ಷಕರಿಗೆ ಅವಮಾನಿಸಿದ್ದು ತಪ್ಪು ,
ಜ್ಞಾನಕ್ಕಿಂತ ಮಿಗಿಲಾದುದು ಜಗತ್ತಿನಲ್ಲಿ ಇನ್ನೊಂದಿಲ್ಲ.ಅಂಥ ಜ್ಞಾನದ ಗಣಿಗಳೆಂದರೆ ಶಿಕ್ಷಕರು.ಏನೂ ಬರೆಯದ ಕರಿ ಹಲಗೆಯಂತಿರುವ ಮಗುವಿನ ಮನಸ್ಸಿನ ಮೇಲೆ ಸುಜ್ಞಾನದ ಮೊದಲ ಗೆರೆ ಎಳೆಯುವವನೇ ಗುರು,ದೇವ ಸ್ವರೂಪಿ ಶಿಕ್ಷಕ, ಅಂಥವರಿಗೇನೇ ನಾಲೇಜ್ ಇರಲ್ಲವೆಂದು ತುಂಬಿದ ಸಭೆಯಲ್ಲಿ ದುರಹಂಕಾರದಿಂದ ಮಾತನಾಡುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿಯವರು ಎಲ್ಲರ ಕ್ಷಮೆ ಕೇಳಬೇಕೆಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ (ರಿ ) ನ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.

ಶಿಕ್ಷಕರ ಜ್ಞಾನ ದೀಕ್ಷೆ ಇಲ್ಲದೆ ಇಷ್ಟೊಂದು ಎತ್ತರಕ್ಕೆ ಬೆಳೆದರೇ? ಇವರು ಗುರುವಿಗೆ, ಗುರು ಸ್ಥಾನಕ್ಕೆ ಇಷ್ಟೊಂದು ಅಗೌರವದಿಂದ ಮಾತನಾಡಲು ಅವರಿಗೆ ವಿನಾಶಕಾಲೇ ವಿಪರೀತ ಬುದ್ದಿಯ ಫಲ ಕಾದಿದೆಯೇ?

ಈ ರಾಜ್ಯದಲ್ಲಿ ಶಿಕ್ಷಕರನ್ನು ನೋಯಿಸಿದ ಸರ್ಕಾರಗಳೇ ಉಳಿದಿಲ್ಲ ಇನ್ನು ಇವನ್ಯಾವ ಮಹಾ? ಗುರುನಿಂದನೆ, ಅವಮಾನಗಳು ಅವರಿಗೆ ತಿರುಗು ಬಾಣಗಳಾಗಿ ಪರಿಣಮಿಸಿದಾಗ ಗೊತ್ತಾಗುತ್ತದೆ ಶಿಕ್ಷಕರ ಮಹಿಮೆ, ಖಂಡಿತಾ ಇದು ಉದ್ಧಟತನದ ಹೇಳಿಕೆ. ಅವರೊಳಗಿನ ಅಜ್ಞಾನದ ಸಂಕೇತ. ಅವರು ಕೂಡಲೇ ಶಿಕ್ಷಕ ಸಮುದಾಯದ ಕ್ಷಮೆ ಕೇಳಬೇಕು. ಅದೂ ತಿರುಳ್ಗನ್ನಡ ನಾಡು ಅಮೋಘ ವರ್ಷ ನೃಪತುಂಗನ ನಾಡಿನಲ್ಲಿ ಸಂಸ್ಕೃತಿಯ ಬೀಡಿನಲ್ಲಿ, ಕೊಪ್ಪಳದ ಗವಿಸಿದ್ದೇಶ್ವರನ ಸನ್ನಿಧಾನದಲ್ಲಿ ಹೀಗೆ ನಾಲಿಗೆಯನ್ನು ಹರಿಬಿಟ್ಟು ಶಿಕ್ಷಕರ ಜ್ಞಾನವನ್ನು ಅವಮಾನಿಸಿ ಮಾತನಾಡುವುದು ಕ್ಷಮಾರ್ಹವಾದುದಲ್ಲ. ಅವರ ನಾಲಿಗೆ ಅವರ ಕುಲವನ್ನು ಹೇಳುತ್ತದೆ. ಸಮುದ್ರವನ್ನು ಕಂಡು ಇದೇನು ಮಹಾವೆಂದು ಮಾತನಾಡುವುದು ಸರಳ ಕಾರ್ಯವಲ್ಲ. ಅದರೊಳಗೆ ಸಿಕ್ಕಾಗಲೇ ಅದರ ಶಕ್ತಿ ಗೊತ್ತಾಗುತ್ತದೆ.ಷಡಕ್ಷರಿಯವರು ತಾವು ಆಡಿರುವ ತಮ್ಮ ಹೇಳಿಕೆಯನ್ನು ಹಿಂಪಡೆದು ಕೂಡಲೇ ಶಿಕ್ಷಕರ ಕ್ಷಮೆ ಕೇಳಿದರೆ ಸರಿ. ಇಲ್ಲವಾದರೆ ರಾಜ್ಯಾದ್ಯಂತ ಶಿಕ್ಷಕ ಸಮುದಾಯ ಹೋರಾಟಕ್ಕಿಳಿದು ತನ್ನ ಸಾಮರ್ಥ್ಯವನ್ನು ತೋರಿಸಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *