ದೇವದುರ್ಗ : ಕರ್ನಾಟಕ ಬೆಳೆ ಸಮಿಕ್ಷೆಗಾರರ ಸಂಘ ದೇವದುರ್ಗ ತಾಲ್ಲೂಕು ಮಟ್ಟದ ಪಿರ್ ವತಿಯೀಯಿಂದ ಇಂದು ಶಾಸಕರಾದ ಶ್ರೀ ಮತಿ ಕರೆಮ್ಮ ಜಿ ನಾಯಕ ರವಿಗೆ ಇಂದು ತಾಲೂಕ ಪಂಚಾಯತ ದೇವದುರ್ಗ ದಲ್ಲಿ ಬೆಳಗಾಂವಿ ಅಧಿವೇಶನದಲ್ಲಿ ಪಿರ್ ಗಳ ಪರ ಬೆಡಿಕೆಗಳು ಹಾಗೂ ನಮ್ಮ ಬಗ್ಗೆ ಧ್ವನಿ ಎತ್ತುವಂತೆ ಮನವಿ ಸಲ್ಲಿಸಲಾಯಿತು.ರಾಜ್ಯದಲ್ಲಿ ನಾವು ಸುಮಾರು 8 ವರ್ಷಗಳಿಂದ ಬೆಳೆ ಸಮೀಕ್ಷೆದಾರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ ಕಂದಾಯ ಇಲಾಖೆ ಕೃಷಿ ಇಲಾಖೆ ಹಾಗೂ ರೈತರ ನಡುವೆ ಕೊಂಡಿಯಾಗಿ ಶ್ರಮವಹಿಸಿ ಮಳೆಗಾಲ ಚಳಿಗಾಲ ಬೇಸಿಗೆ ಲೆಕ್ಕಿಸದೇ ಎದೆ ಎತ್ತರ ಬೆಳೆದ ಬೆಳೆಗಳ ಮಧ್ಯ ಹೋಗಿ ಜೀವ ಅಪಾಯದಲ್ಲಿ ಸಮೀಕ್ಷೆ ಕಾರ್ಯ ಮಾಡುವ ನಾವು ಅನೇಕ ತೊಂದರೆ ತಾಪತ್ರಯ ಅನುಭವಿಸುದ್ದೇವೆ ಹೀಗಾಗಿ ಬೆಳೆ ಸಮೀಕ್ಷೆದಾರರಿಗೆ ಮೂಲ ಸೌಕರ್ಯದ ಜೋತೆಗೆ ಸೀಮಿತ ಕಾರ್ಮಿಕರಾಗಿರುವ ನಮಗೆ ಕನಿಷ್ಠ ವೇತನ ನಿಗದಿ ಮಾಡಿ ದಿನಗೂಲಿ ಕಾರ್ಮಿಕರನ್ನಾಗಿ ನೇಮಕ ಮಾಡುವಂತೆ ನಮ್ಮ ಪರವಾಗಿ ಬರುವ ಚಳಿಗಾಲ ಬೆಳಗಾವಿ ಅಧಿವೇಶನದಲ್ಲಿ ತಾವು ಧ್ವನಿ ಎತ್ತಬೇಕೆಂದು ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ
ಅಧ್ಯಕ್ಷರು ನಾಗರಾಜ ಪಾಟೀಲ್, ಉಪಾಧ್ಯಕ್ಷರು ಹನುಮಂತ್ರಾಯ ದೊರೆ, ಪ್ರಧಾನ ಕಾರ್ಯದರ್ಶಿ ರಾಜು ಸಂಘಟನೆ ಸಹ ಕಾರ್ಯದರ್ಶಿ ಹನುಮೇಶ ನಾಯಕ ಮತ್ತು ನಿಂಗಯ್ಯ, ಚಂದ್ರು,ಚನ್ನಪ್ಪ , ಸಂಗಮೇಶ ,ಶಿವಪ್ಪ ಮತ್ತು ಇನ್ನಿತರರು ಭಾಗವಹಿಸಿದ್ದರು

