ತಾಂಡವಪುರ ನವಂಬರ್ 13ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ‘ಕಾಸ್ಮೋಸ್–ಮೈಸೂರು ತಾರಾಲಯ’ವನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರವರು ಬಟನ್ ಒತ್ತುವುದರ ಮೂಲಕ ಉದ್ಘಾಟನೆ ನಡೆಸಿದರು
ಬಾಹ್ಯಾಕಾಶದ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ₹116 ಕೋಟಿ ವೆಚ್ಚದಲ್ಲಿ ಈ ಅತ್ಯಾಧುನಿಕ ʻಕಾಸ್ಮೋಸ್-ಮೈಸೂರು ತಾರಾಲಯʼವನ್ನು ನಿರ್ಮಿಸಲಾಗಿದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಿಂದ (IIA) ನಿರ್ಮಿಸಲಾದ ಕಾಸ್ಮೋಸ್-ಮೈಸೂರು, ಭಾರತದ ಮೊದಲ ಎಲ್‌ಇಡಿ ಡೋಮ್ ತಾರಾಲಯವಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ʻಸ್ಕೈ ಥಿಯೇಟರ್‌ʼ ಜೊತೆಗೆ ಖಗೋಳ ವಿಜ್ಞಾನದ ವಸ್ತುಸಂಗ್ರಹಾಲಯ, ಪ್ರದರ್ಶನ ಸಭಾಂಗಣಗಳು, ಉಪನ್ಯಾಸ ಕೊಠಡಿಗಳು ಹಾಗೂ ತರಬೇತಿ ಪ್ರಯೋಗಾಲಯಗಳಿವೆ. ಎಂದು ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳು ಹೇಳಿದರು
ಈ ಸಂದರ್ಭದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್‌ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಹಾಗೂ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ರವರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *