ಶಾಂತಿ ಸಹಬಾಳ್ವೆಗೆ ಜಗತ್ಪ್ರಸಿದ್ಧವಾದ ಭಾರತ. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ, ದೇಶದ ಅಭಿವೃದ್ಧಿಗಾಗಿ ಅತ್ಯಮೂಲ್ಯವಾದ ಸೇವೆಗೈದ ಅನರ್ಘ್ಯ ರತ್ನಗಳಲ್ಲಿ ಪಂಡಿತ ಜವಾಹರಲಾಲ್ ನೆಹರೂಜಿಯವರೊಬ್ಬರು.
ಪ್ರಖ್ಯಾತ ವಕೀಲ ಮೋತಿಲಾಲ ನೆಹರು ಹಾಗೂ ಸ್ವರೂಪರಾಣಿಯವರ ಪ್ರೀತಿಯ ಸುಪುತ್ರನಾಗಿ ೧೮೮೯ ನವೆಂಬರ್ ೧೪ ರಂದು ಜವಾಹರಲಾಲ್ ಅವರ ಜನನವಾಯಿತು. ತಂದೆ ಬ್ರೀಟೀಷ ಪದ್ಧತಿಯಲ್ಲಿ ಬೆಳೆಸಲು ಆಪೇಕ್ಷಿಸಿದರೆ ತಾಯಿ ಮಗ ಜವಾಹರನಿಗೆ ಭಾರತೀಯ ಪರಂಪರೆಯನ್ನು ಕಲಿಸಿದರು. ಇದರಿಂದಾಗಿ ಇವರಿಗೆ ವಿದೇಶಿಯ ಶಿಕ್ಷಣ ಭಾರತೀಯ ಸಂಸ್ಕೃತಿ ಎರಡೂ ಸಮಾನವಾಗಿದೊರೆತವು. ಜವಾಹರರಿಗೆ ತಂದೆ ಮನೆಯಲ್ಲಿಯೇ ಆಂಗ್ಲ ಮಾಧ್ಯಮದಲ್ಲಿ ಪಾಠ ಹೇಳಿಸಿದರು ಹಿಂದಿ ಹಾಗೂ ಆಂಗ್ಲ ಭಾಷೆ ಸರಳವಾಗಿ ಮಾತನಾಡಲು ಬಂದನAತರ ಇವರನ್ನು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಕಳುಹಿಸಿಕೊಟ್ಟರು. ಲಂಡನ್ ನಗರದ ಹ್ಯಾರೋ ಪಬ್ಲಿಕ್ ಶಾಲೆಯಲ್ಲಿ ಎರಡು ವರ್ಷ ಕೆಂಬ್ರಿಜ್ ಟ್ರಿನಿಟಿ ಕಾಲೇಜಿನಲ್ಲಿ ಎರಡು ವರ್ಷ ಅಧ್ಯಯನದ ನಂತರ ಲಂಡನ್ನಿನಲ್ಲಿ ಕಾನೂನು ಅಭ್ಯಾಸ ಕೈಗೊಂಡು ೧೯೧೨ ರಲ್ಲಿ ಕಾನೂನು ಪರೀಕ್ಷೆ ಪಾಸಾಗಿ ಭಾರತಕ್ಕೆ ಮರಳಿದರು.
೧೯೧೬ ರಲ್ಲಿ ಕಮಲಾಳೊಂದಿಗೆ ವಿವಾಹ ಜರುಗಿತು ಸುಂದರವಾದ ಹೆಣ್ಣು ಮಗು ಜನಿಸಿತು ಅವಳೆ ಪ್ರಿಯದರ್ಶಿನಿ, ಇಂದಿರಾ ಮುಂದೆ ಭಾರತದ ಪ್ರಧಾನಿಯಾಗಿ ಸಾಧನೆ ಮಾಡಿದರು. ಜವಾಹರರು ರಾಜಕೀಯ ಕ್ಷೇತ್ರಕ್ಕೆ ಬರಲು ಪ್ರೇರಣೆ ನೀಡಿದವರೆಂದರೆ ಬಾಲ ಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಭಾರತೀಯರ ಜನ್ಮ ಸಿದ್ದ ಹಕ್ಕು ಎಂದರು, ಆನಿಬಿಸೆಂಟ್ ಆಂಗ್ಲ ಮಹಿಳೆ ಹೋಮ್ ರೂಲ್ ಚಳುವಳಿಯಿಂದ ಭಾರತೀಯರಿಗೆ ಜಾಗೃತೆ ಮೂಡಿಸಿದಳು. ಮಹಾತ್ಮಾ ಗಾಂಧೀಜಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದರು. ಜವಾಹರರು ಅಲಹಾಬಾದ ನಗರ ಸಭೆಯ ಅಧ್ಯಕ್ಷರಾಗಿ, ಕಿಸಾನ್ ಸಭಾದ ಉಪಾಧ್ಯಕರಾಗಿ ರೈತರ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸಿದರು. ೧೯೨೯ ರಲ್ಲಿ ಲಾಹೋರಿನಲ್ಲಿ ನಡೆದ ಕಾಂಗ್ರೆಸ್ಸಿನ ಅಧೀವೇಶನಕ್ಕೆ ಅಧ್ಯಕ್ಷರಾದರು. ಲಾಹೋರ್ ಅಧೀವೇಶನದ ನಂತರ ಮೋತಿಲಾಲ ನೆಹರೂ ಅವರು ತಮ್ಮ ಸ್ವಂತ ಮನೆ ಆನಂದ ಭವನ ವನ್ನು ದೇಶಕ್ಕಾಗಿ ಕಾಣಿಕೆಯಾಗಿ ನೀಡಿದರು. ಆ ಮನೆಗೆ ಸ್ವರಾಜ ಭವನ ಎಂದು ಮರುನಾಮಕರಣ ಮಾಡಿದರು.
ಬ್ರಿಟೀಷರ ಗುಲಾಮಗಿರಿಯಿಂದ ದೇಶಕ್ಕೆ ಸ್ವಾತಂತ್ರ್ಯ ಒದಗಿಸಬೇಕೆಂಬ ಗಾಂಧೀಜಿಯವರ ನೇತೃತ್ವದಲ್ಲಿ ಜವಾಹರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಹಲವು ಸಾರೆ ಸೆರೆಮನೆವಾಸ ಅನುಭವಿಸಿದರು. ಅವರ ಪತ್ನಿ ಕಮಲಾ ಹಾಗೂ ಸೋದರಿ ಕೃಷ್ಣ ಅವರು ಕೂಡ ಭಾಗಿಗಳಾಗಿದ್ದರು. ೧೯೩೬ ಜವಾಹರರ ಪತ್ನಿ ಕಮಲಾ ಅವರು ತೀರಿಕೊಂಡರು. ನಂತರ ಪ್ರೀತಿಯ ಪುತ್ರಿ ಇಂದಿರಾ ಅವರಿಗೆ ಇವರೇ ತಂದೆ ತಾಯಿಯಾದರು. ಜೈಲಿನಲ್ಲಿದ್ದಾಗ ಸಹಪಾಠಿಗಳಿಗೆ ಅಕ್ಷರ ಅಭ್ಯಾಸ ದೇಶದ ಸ್ವಾತಂತ್ರ್ಯ ಕುರಿತು ತಿಳುವಳಿಕೆ ಜಾಗೃತೆಯ ಬಗ್ಗೆ ತಿಳಿಹೇಳುತ್ತ ಜೈಲನ್ನು ಪಾಠಶಾಲೆಯನ್ನಾಗಿ ಮಾಡಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಮಗಳಿಗೆ ಶಿಕ್ಷಣ, ಆದರ್ಶತೆ ಕುರಿತು ಹಲವಾರು ಪತ್ರಗಳನ್ನು ಬರೆಯುತ್ತಿದ್ದು. ಈ ಪತ್ರಗಳ ಸಂಗ್ರಹವೇ Letters to his daughter ಎಂಬ ಹೆಸರಿನಿಂದ ಇಂದಿಗೂ ರಾರಾಜಿಸುತ್ತಿದೆ. ಗ್ಲಿಂಪ್ಸಿಸ್ ಆಫ್ ವರ್ಲ್ಡ್ ಹಿಸ್ಟರಿ ಹಾಗೂ ಅಟೋಬಯಾಗ್ರಫಿ, ಡಿಸ್ಕವರಿ ಆಫ್ ಇಂಡಿಯಾ ಪುಸ್ತಕಗಳನ್ನು ಸೆರೆಮನೆಯಲ್ಲಿಯೇ ರಚಿಸಿದರು.
೧೯೪೭ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಭಾರತದ ಪ್ರಥಮ ಪ್ರಧಾನಿಯನ್ನಾಗಿ ಜವಾಹರರನ್ನು ಬಹುಮತದಿಂದ ಆಯ್ಕೆಮಾಡಲಾಯಿತು. ಈ ರೀತಿ ಜವಾಹರರು ತಮ್ಮ ಕಾಲೇಜು ಶಿಕ್ಷಣದ ಮುಕ್ತಾಯದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಹಲವು ವಿಭಿನ್ನರೀತಿಯ ಚಳುವಳಿಯಲ್ಲಿ ಪಾಲ್ಗೊಂಡು ಅಸಹನೀಯ ಹಿಂಸೆ ಉಂಟಾದರೂ ಅಂಜದೆ, ಅಳುಕದೇ ಎದೆಕೊಟ್ಟುನಿಂತು ಭಾರತಾಂಬೆಗೆ ಸ್ವಾತಂತ್ರö್ಯ ಸಿಗುವಲ್ಲಿ ತಮ್ಮ ಅಮೂಲ್ಯವಾದ ಸೇವೆ ಮಾಡಿದ್ದಾರೆ.
೧೯೫೨ ರಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆ ಪ್ರಾರಂಭಿಸಿ ದೇಶದ ಅದರಲ್ಲೂ ಗ್ರಾಮೀಣ ಜನರ ಬದುಕಿಗೆ ಬೆನ್ನೆಲುಬಾಗಿದ್ದ ವ್ಯವಸಾಯಕ್ಕಾಗಿ ಹಲವಾರು ಆಣೆಕಟ್ಟುಗಳನ್ನು ಕಟ್ಟಿಸಿದರು ಅವುಗಳಿಗೆ ಭಾರತದ ನೂತನ ದೇವಾಲಯಗಳೆಂದು ಕರೆದರು. ೧೯೫೪ ರಲ್ಲಿ ಪಂಚಶೀಲ ಎಂಬ ಐದು ವಿಚಾರಗಳನ್ನು ದೇಶದ ಮುಂದಿಟ್ಟರು. 1) ರಾಷ್ಟ್ರಗಳು ಒಂದಾನೊಂದು ಗೌರವದಿಂದ ಕಾಣಬೇಕು. 2) ಪರಸ್ಪರ ಪ್ರದೇಶಗಳ ಮೇಲೆ ದಾಳಿ ಮಾಡಕೂಡದು 3) ಒಂದು ದೇಶದವರು ಇನ್ನೊಂದು ದೇಶದ ವಿಷಯದಲ್ಲಿ ಕೈ ಹಾಕಕೂಡದು 4) ರಾಷ್ಟçಗಳು ಪರಸ್ಪರರನ್ನು ಸಮಾನವಾಗಿ ಕಾಣಬೇಕು 5) ಶಾಂತಿಯುತ ಸಹಜೀವನ ಮತ್ತು ಆರ್ಥಿಕ ಸಹಾಯ ಎಲ್ಲರ ಗುರಿಯಾಗಬೇಕು. ಇವುಗಳ ಪಾಲನೆಯಿಂದ ಜಗತ್ತಿನಲ್ಲಿ ಶಾಂತಿ ಸಮಾನತೆ ಸಾಧ್ಯವೆಂದು ನೆಹರೂ ಅವರು ಹೇಳಿದರು. ವಿಶ್ವಶಾಂತಿಗಾಗಿ ರಚನೆಗೊಂಡ ಸಂಯುಕ್ತ ರಾಷ್ಟ್ರ ಸಂಘವನ್ನು ಬೆಂಬಲಿಸಿದರು. ವಿಶ್ವ ಮೈತ್ರಿಯತೆ ಮೂಲಕ ವಿಶ್ವ ಶಾಂತಿಗಾಗಿ ಕೈಗೊಂಡ ಅವರ ಸೇವೆ ತ್ಯಾಗಕ್ಕಾಗಿ ಅವರನ್ನು ಶಾಂತಿ ದೂತ ಎಂದು ಕರೆದರು. ಇವರ ದೇಶ ಪ್ರೇಮ ಮತ್ತು ದೇಶ ಸೇವೆಗಾಗಿ ೧೯೫೫ ರಲ್ಲಿ ಭಾರತ ರತ್ನ ಪದವಿ ನೀಡಿ ಗೌರವಿಸಲಾಯಿತು.
ಈ ರೀತಿ ಪ್ರಧಾನಿಯಾಗಿ ೧೭ ವರ್ಷಗಳ ಕಾಲ ಮಾಡಿ ಸೇವೆ ಅಪ್ರತಿಮವಾದದ್ದು ಇದಕ್ಕಾಗಿ ಇವರನ್ನು ಆಧುನಿಕ ಭಾರತದ ಶಿಲ್ಪಿ ಎಂದು ಪ್ರಶಂಸಿಸಲಾಗಿದೆ. ಇವರಿಗೆ ಗುಲಾಬಿ ಹಾಗು ಮಕ್ಕಳೆಂದರು ಅಪಾರವಾದ ಪ್ರೀತಿ ತಮ್ಮ ಕೆಲಸದ ಮಧ್ಯೆ ಬಿಡುವು ಸಿಕ್ಕಾಗಲೆಲ್ಲಮಕ್ಕಳೊಂದಿಗೆ ಮಕ್ಕಳಾಗಿ ಆಟವಾಡುತ್ತ ಪ್ರೀತಿ, ಮಮತೆಯಿಂದ ಮಾಡನಾಡುತ್ತ ಮಕ್ಕಳನ್ನು ಅಪ್ಪಿಕೊಳ್ಳುತ್ತಿದ್ದರು. ಮಕ್ಕಳೂ ಸಹ ಅಷ್ಟೇ ಪ್ರೀತಿಯಿಂದ ಇವರನ್ನು ಅಕ್ಕರೆಯ ಚಾಚಾ ಎಂದು ಕರೆಯುತ್ತಿದ್ದರು. ಆದ್ದರಿಂದಲೇ ಜವಾಹರರ ಜನ್ಮದಿನದ ಉತ್ಸವವನ್ನು ಮಕ್ಕಳ ದಿನಾಚಾರಣೆ ಎಂದು ಆಚರಿಸಲಾಗುತ್ತಿದೆ.
೧೯೬೪ ಮೇ ೨೭ ರಂದು ಭಾರತದ ದಿವ್ಯಜ್ಯೋತಿ ನಂದಿತು ಭಾರತೀಯರಿಗೆ ಕರಾಳವಾದ ದಿನ ಅಂದು ನೆಹರು ಅವರು ನಮ್ಮನ್ನು ಅಗಲಿದರು. ಭಾರತದ ಆಗಿನ ರಾಷ್ಟçಪತಿ ಡಾ:ಎಸ್.ರಾಧಾಕೃಷ್ಣನ್ ರವರು ಜವಾಹರರು ಇಲ್ಲದ ಭಾರತವನ್ನು ಕಲ್ಪಿಸುವುದು ಅಸಾಧ್ಯ ಅವರಿ ಅಪೂರ್ಣವಾಗಿ ಉಳಿಸಿರುವ ಕಾರ್ಯಗಳನ್ನು ಪೂರ್ಣಗೊಳಿಸುವುದು ನಾವು ಅವರಿಗೆ ನೀಡುವ ಅಗೌರವವಾಗಿದೆ ಭಾರತ ಜವಾಹರರನ್ನು ಎಂದಿಗೂ ಮರೆಯಲಾರದೆಂದು ಹೇಳಿದ್ದಾರೆ. ೧೯೪೭-೬೪ ರ ಸಮಯವನ್ನು ಜವಾಹರ ಯುಗ ಎಂದು ಕರೆಯುವರು. ಸಂತ ವಿನೋಬಾ ಭಾವೆ ಅವರು ನೆಃರು ಅವರನ್ನು ಲೋಕದೇವ ಎಂದು, ರವೀಂದ್ರನಾಥ ಠಾಕೂರರು ಋತುರಾಜ ಎಂದು ಕರೆದಿದ್ದಾರೆ. ಶಾಂತಿದೂತ, ಗುಲಾಬಿ ನೆಹರು, ಮಕ್ಕಳ ಚಾಚಾ ಇಂದು ನಮ್ಮಿಂದ ದೂರ ಹೋಗಿದ್ದರೂ ಅವರ ಆದರ್ಶಗಳು ನಮ್ಮ ಬದುಕಿಗೆ ದಾರಿದೀಪ ಆ ಬೆಳಕಿನಲ್ಲಿ ನಾವೆಲ್ಲ ಸಾಗೋಣ.
ಬೀರಪ್ಪ ಶಂಭೋಜಿ ಸಿಂಧನೂರು
ದೇಶದ ಮಕ್ಕಳ ಬಗ್ಗೆ ಅಪಾರ ಪ್ರೀತಿ, ಮಮತೆ ಹೊಂದಿದ ನೆಹರು ಮಕ್ಕಳನ್ನು ಕಂಡರೆ ಅಪ್ಪಿಕೊಂಡು ಅವರೊಂದಿಗೆ ಶಾಂತತೆ ಯಿಂದ ಮಾತನಾಡುತ್ತಿದ್ದರು ಮಕ್ಕಳು ನೆಹರು ಅವರನ್ನು ಕಂಡ ಕೂಡಲೇ ಅವರನ್ನು ಸುತ್ತು ವರಿದು ಸಂತೋಷ ಹಂಚಿಕೊಳ್ಳುತ್ತಿದ್ದರು ಹೀಗಾಗಿ ಇವರನನ್ನು ಮಕ್ಕಳ ಚಾಚಾ ನೆಹರು ಎಂದು ಕರೆಯುತ್ತಾರೆ.
