ಕಂಪ್ಲಿ : ಪಟ್ಟಣದ ವೀರಶೈವ ಭವನದ ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕಂಪ್ಲಿ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಕನ್ನಡ ಭಾಷೆ, ನೆಲ-ಜಲ ಹಾಗೂ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾದ ಷಣ್ಮುಖಪ್ಪ ಚಿತ್ರಗಾರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸಮ್ಮೇಳನದ ಆಶಯಗಳನ್ನು ವಿವರಿಸಿದರು.
ಇದೇ ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಕಾದಂಬರಿಗಳಾದ ‘ಧನ್ಯ’ ಮತ್ತು ‘ಮಿಸ್ಸಿಂಗ್’ ಹಾಗೂ ‘ಏಕಾಂತ’ ನಾಟಕ ಸೇರಿದಂತೆ ‘ಅಂತರ್ ವೃತ್ತ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
ಈ ಸಾಹಿತ್ಯ ಸಂಭ್ರಮದಲ್ಲಿ ಕೆ. ಶ್ರೀನಿವಾಸ್ ರಾವ್, ಅರವಿ ಬಸವನಗೌಡ್ರು, ಕ.ಮಾ. ಹೇಮಯ್ಯಸ್ವಾಮಿ, ಡಿ.ವಿ. ಸುಬ್ಬರಾವ್, ಎ.ಸಿ. ದಾನಪ್ಪ, ಬಿ. ಸಿದ್ದಪ್ಪ, ಕೃಷ್ಣ, ಎಸ್. ಪೊಳ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಂಬಿಗರ ಮಂಜುನಾಥ್, ಎಸ್.ಡಿ. ಬಸವರಾಜ್, ಶ್ವೇತಾ, ಅಕ್ಕಿ, ಸಿ. ವೆಂಕಟೇಶ್, ಎಸ್. ವಿಜಯಲಕ್ಷ್ಮಿ, ಅಶೋಕ ಕುಕೂನೂರು ಬಿ. ಜಿಲಾನಸಾಬ್, ಹಾದಿಮನಿ ಕಾಳಿಂಗವರ್ಧನ, ಚಂದ್ರಶೇಖರ ಗೌಡ, ನಎಲೆಗಾರ ವೆಂಕಟರೆಡ್ಡಿ, ಯು. ವಿದ್ಯಾಶಂಕರ, ಹಾಗೂ ಎಂ. ಶಾಷಾವಲಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *