ಮುಧೋಳ: ದಿ ರಮೆಶ ಗಡದನ್ನವರ ವೆದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದಿಂದ ರೈತರ ನಿರಂತರ ಹೋರಾಟ, ಒಗ್ಗಟ್ಟು ಹಾಗೂ ಸಂಘಟಿತ ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ. ಕಬ್ಬು ಬೆಳೆಗಾರರ ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಒಂದು ಟನ್ ಕಬ್ಬಿಗೆ ₹3,800 ದರ ಘೋಷಣೆಯಾಗಿರುವುದು ರೈತ ವಲಯದಲ್ಲಿ ಸಂತಸ ಮೂಡಿಸಿದೆ.
ಕಬ್ಬು ಬೆಳೆ ಬೆಳೆಯಲು ರೈತರು ಅಪಾರ ಶ್ರಮ, ಬಂಡವಾಳ ಹಾಗೂ ಸಮಯವನ್ನು ವಿನಿಯೋಗಿಸುತ್ತಾರೆ. ಆದರೆ ಕೃಷಿ ವೆಚ್ಚ ಹೆಚ್ಚಳ, ಕೂಲಿ ಕಾರ್ಮಿಕರ ಸಮಸ್ಯೆ, ಗೊಬ್ಬರ ಹಾಗೂ ಔಷಧಗಳ ಬೆಲೆ ಏರಿಕೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕೆಂದು ರೈತರು ಧ್ವನಿ ಎತ್ತಿ ಹೋರಾಟ ನಡೆಸಿದ್ದರು.
ರೈತರ ಒಗ್ಗಟ್ಟು, ಹೋರಾಟದ ಮನೋಭಾವ ಮತ್ತು ನ್ಯಾಯಕ್ಕಾಗಿ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಒಂದು ಟನ್ ಕಬ್ಬಿಗೆ ₹3,800 ಬೆಲೆ ದೊರೆತಿರುವುದು ರೈತ ಸಮುದಾಯಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.
ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಅನ್ನದಾತನ ಬದುಕು ಹಸನಾಗಬೇಕು. ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಹೋರಾಟಗಳು ಯಶಸ್ವಿಯಾಗಲಿ ಎಂಬುದು ಎಲ್ಲರ ಆಶಯವಾಗಿದೆ.
ರೈತರ ಒಗ್ಗಟ್ಟಿಗೆ ಜಯವಾಗಲಿ… ಅನ್ನದಾತನ ಹೋರಾಟಕ್ಕೆ ಜಯವಾಗಲಿ!

Leave a Reply

Your email address will not be published. Required fields are marked *