ಲಿಂಗಸಗೂರು : ನ 12 –
ಪಟ್ಟಣದ ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುಣಕಲ್ ಗ್ರಾಮದ ಯಲ್ಲಮ್ಮ @ಯಲ್ಲವ್ವ ಈಕೆಯ ಮಕ್ಕಳು ಮೊಬೈಲ್ ನಲ್ಲಿ ಸಾಂಗ್ ಹಚ್ಚಿದಾಗ ಆರೋಪಿಯ ಮಗನಾದ ಮಾಳಿಂಗರಾಯನು ಮೊಬೈಲ್ ನಲ್ಲಿ ಸಾಂಗ್ ಹಾಕಬೇಡ ಅಂತ ಬಾಯಿ ಮಾಡಿ ಸಿಟ್ಟು ಮಾಡಿಕೊಂಡು ಬಂದಿದ್ದರಿಂದ ಆರೋಪಿಗಳು ಸೇರಿ ಯಲ್ಲಮ್ಮ @ ಯಲ್ಲವ್ವಳ ಮನೆಯ ಹತ್ತಿರ ಬಂದು ಜಗಳ ತೆಗೆದು ಹಲ್ಲೆ ಮತ್ತು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಅನ್ವಯ ಆರೋಪಿತರ ವಿರುದ್ಧ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ SC/ST ಕಾಯ್ದೆ ಪ್ರಕಾರ Act-2015 ಆರೋಪಿಗಳ ವಿರುದ್ಧ ಅಂದಿನ ತನಿಖಾಧಿಕಾರಿಯಾಗಿದ್ದ ಎಸ್.ಎಸ್ ಹುಲ್ಲೂರು ಪೊಲೀಸ್ ಉಪಾಧೀಕ್ಷಕರು ಇವರು ಪ್ರಕಾರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡು ನಂತರ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ. ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಎ ಸೋಮಶೇಖರ 3 ನೇ ಅಧಿಕ ಜಿಲ್ಲಾ & ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು ಇವರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ದಿನಾಂಕ:-07-11-2026 ರಂದು ಆರೋಪಿಗಳಾದ ಯಲ್ಲಪ್ಪ ಮತ್ತು ಬಸಪ್ಪ ಇವರು ಅಪರಾಧ ಎಸಗಿದ್ದಾರೆಂದು ಪರಿಗಣಿಸಿ ಆರೋಪಿಗಳಿಗೆ 06 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 3,000=00 ರೂ ದಂಡ ವಿಧಿಸಿದ ನ್ಯಾಯಾಲಯ ತೀರ್ಪು ನೀಡಿದ್ದು ಸರ್ಕಾರದ ಪರವಾಗಿ ಮಂಜುನಾಥ ಬೇರ್ಗಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ ಹಾಗೂ ನಿಂಗಯ್ಯ ಪಿ.ಸಿ ನಂ:110 ಮತ್ತು ಮಂಜುನಾಥ ಸಿಪಿಸಿ-118 ಲಿಂಗಸಗೂರು ಠಾಣೆ ರವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಹಾಜರುಪಡಿಸಿರುತ್ತಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Reply

Your email address will not be published. Required fields are marked *