ಕವಿತಾಳ :
ಪಟ್ಟಣದ ಮಸ್ಕಿ ಕ್ರಾಸ್ ಹತ್ತಿರದ ಫ್ರೆಂಡ್ಸ್ ಡಾಭಾದ ಹಿಂದೆ ಇರುವ ನಿವೃತ್ತ ಶಿಕ್ಷಕ ಅಮರಪ್ಪ ಚಕ್ರಸಾಲಿ ಅವರ ಮನೆಯ ಭಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ,
ಮನೆಯ ಮಾಲೀಕರು ಊರಲ್ಲಿ ಇಲ್ಲದ ಸಮಯದಲ್ಲಿ ಯಾರೋ ದುಶ್ಕರ್ಮಿಗಳು ಬಾಗಿಲಿನ ಪತ್ತ ಮತ್ತು ಬಾಗಿಲನ್ನು ಮುರಿದಿದ್ದು ಅದೃಷ್ಠವಶಾತ್ ಮನೆಯಲ್ಲಿ ಹಣ ಮತ್ತು ಬಂಗಾರ ಇರದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದ್ದು , ಬಾಗಿಲಿನ ಹಿಂಬದಿಯ ಲಾಕ್ ತೆಗೆಯಲು ಯಾವುದೋ ಕಬ್ಬಿಣದ ವಸ್ತುವನ್ನು ಬಳಸಲಾಗಿದೆ ಎಂದು ತಿಳಿಯಬಹುದು ಏಕೆಂದರೇ ಒಳಗಿನ ಲಾಕ್ ಮುರಿಯದ ಕಾರಣ ಬಾಗಿಲಿನ ಕದವನ್ನೆ ಮುರಿದಿದ್ದು ನೋಡಿದರೆ ಕಬ್ಬಿಣದ ಆರಿ ಬಳಸಿರಬಹುದೆಂಬ ಅನುಮಾನ ಉಂಟಾಗುತ್ತಿದೆ, ಬೆಳಗಿನ ಜಾವ ಮಾಲೀಕರು ಮನೆಗೆ ಬಂದಾಗ ಕಳ್ಳತನಕ್ಕೆ ಯತ್ನ ನಡೆಸಿದ್ದು ಬೆಳಕಿಗೆ ಬಂದಿದೆ .
ಸ್ಥಳಕ್ಕೆ ಕವಿತಾಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *