ಸಿಂಧನೂರು ನ.೧೧
ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇದುವರೆಗೂ ಯಾರು ಕೂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಡಿಲ್ಲ, ಪ್ರಪ್ರಥಮವಾಗಿ ನಾವು ತುರ್ವಿಹಾಳ ಪಟ್ಟಣದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನವೆಂಬರ್ ೧೨ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು
ಹಮ್ಮಿಕೊಂಡಿದ್ದೇವೆ ಎಂದು ಮಸ್ಕಿ ಕ್ಷೇತ್ರದ ಶಾಸಕರು ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು, ಹಾಗೂ ಸಮುದಾಯ ಆರೋಗ್ಯ ಕೇಂದ್ರ ತುರ್ವಿಹಾಳ, ಸುಗುಣ ಆಸ್ಪತ್ರೆ ಸಿಂಧನೂರು, ಇವರ ಸಯುಕ್ತಾಶ್ರಯದಲ್ಲಿ ಹಾಗೂ ಆರ್.ಬಸನಗೌಡ ತುರ್ವಿಹಾಳ ಶಾಸಕರು ಮಸ್ಕಿ ಕ್ಷೇತ್ರ ಹಾಗೂ ಅಧ್ಯಕ್ಷರು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕರ್ನಾಟಕ ಸರ್ಕಾರ ಬೆಂಗಳೂರು ಇವರ ನೇತೃತ್ವದಲ್ಲಿ ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವೆಂಬರ್ ೧೨ ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ತುರ್ವಿಹಾಳ ಸುತ್ತಮುತ್ತಲಿನ ಗ್ರಾಮದ ಜನರು ಈ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರಿಂದ ತಪಾಸಣೆ, ರಕ್ತ ಪರೀಕ್ಷೆ ಮತ್ತು ಸಮಾಲೋಚನೆ ನಡೆಸಿ ಆರೋಗ್ಯ ಕಾಪಾಡಿಕೊಳ್ಳಿ, ಸರಿಸುಮಾರು ೪೦ಕ್ಕೂ ಹೆಚ್ಚು ನುರಿತ ವೈದ್ಯರು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು, ಜನರಿಗೆ ಆರೋಗ್ಯವಾಗಿರಲು ಮಾಹಿತಿ ನೀಡುವರು, ಅವಶ್ಯಕತೆಯಿದ್ದರೆ ಸೂಕ್ತ ಚಿಕಿತ್ಸೆ ಪಡೆಯಲು ಸಲಹೆ ಸೂಚನೆ ನೀಡುವರು ಈ ಉಚಿತ ತಪಾಸಣಾ ಶಿಬಿರವನ್ನು ಮಸ್ಕಿ ಕ್ಷೇತ್ರದ ಜನರು ಮತ್ತು ಸಿಂಧನೂರು ತಾಲೂಕಿನ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಂತರ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ನಾಗರಾಜ ಕಾಟ್ವಾ ಮಾತನಾಡಿ, ಸ್ತ್ರೀ ರೋಗ ಮತ್ತು ಪ್ರಸೂತಿ ಸೇವೆ, ಹೃದಯ ರೋಗದ ಚಿಕಿತ್ಸೆ, ಮಕ್ಕಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ, ಕಣ್ಣಿನ ಸಮಸ್ಯೆ, ಕಿವಿ ಮತ್ತು ಗಂಟಲು ಸಮಸ್ಯೆಗಳ ಚಿಕಿತ್ಸೆ, ಸಕ್ಕರೆ ಖಾಯಿಲೆ, ಬಿ.ಪಿ, ಅಸ್ತಮ, ಕೀಲು ಮತ್ತು ಮೂಳೆ ಚಿಕಿತ್ಸೆ, ನರರೋಗ ಮತ್ತು ಮೂತ್ರರೋಗ ಚಿಕಿತ್ಸೆ, ಮಾನಸಿಕ ರೋಗ, ದಂತ ರೋಗ, ಆಯುಷ್ ಸೇವೆ, ಚರ್ಮರೋಗ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ತಪಾಸಣಾ ನಡೆಸಿ ಅಗತ್ಯವಿದ್ದರೆ ಉಚಿತ ಚಿಕಿತ್ಸೆ ಮಾಡಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ,
ಈ ಉಚಿತ ತಪಾಸಣಾ ಶಿಬಿರದಲ್ಲಿ ಉತ್ತಮ ನುರಿತ ವೈದ್ಯರಾದ ಡಾ.ಶ್ರೀರಾಮ ನಲ್ಲಾ, ಡಾ.ಕೋನಿಕಾ, ಡಾ.ದೀಪಿಕಾ, ಡಾ.ಸುರೇಶಗೌಡ, ಡಾ.ಹನುಮಂತರೆಡ್ಡಿ,
ಆಯುಷ್ ಡಾ.ವಿರುಪಾಕ್ಷಪ್ಪ ಟಿ, ಕೀಲು ಮತ್ತು ಮೂಳೆ ತಜ್ಞ ಡಾ.ಸಲಾಮುದ್ದಿನ್, ಡಾ.ವಿನಿತ್, ಡಾ.ಅನಿಲ್, ಡಾ.ಅರವಿಂದ ಗಾರಪಾಟಿ, ಡಾ.ಸುಹಾನ್ ಜಿ, ಡಾ.ರಾಕೇಶ ನಲ್ಲಾ, ಡಾ.ಯಶ್ವಂತ್ ನಲ್ಲಾ, ಡಾ.ವಿಜಯಲಕ್ಷ್ಮಿ ನಲ್ಲಾ, ಡಾ.ಅಖಿಲಾ ನೆಕ್ಕಂಟಿ, ಡಾ.ಹಾರಿಕಾ ನಲ್ಲಾ, ಡಾ.ಯಶ್ವಂತ್ ನೆಕ್ಕಂಟಿ, ಲಲಿತಾಶ್ರೀ
ಡಾ.ಶಿವಕುಮಾರ ಪೂಜಾರಿ, ಡಾ.ಶಶಿಕುಮಾರ, ಡಾ.ಸೋಮು, ಡಾ.ದೀಲಿಪ ಕೃಷ್ಣ, ಡಾ.ತಸ್ಮಿಯಾ, ಡಾ.ಆಶಿಶ್, ಡಾ.ಮೌನೇಶ ಪೂಜಾರಿ, ಡಾ.ಬಸವರಾಜ, ಡಾ.ಶ್ವೇತಾಂಬರಿ, ಡಾ.ಅನಿತಾ, ಸೇರಿದಂತೆ ೪೦ಕ್ಕೂ ಹೆಚ್ಚು ನುರಿತ ವೈದ್ಯರು ಆಗಮಿಸಲಿದ್ದಾರೆ ಎಂದರು.
ಈ ವೇಳೆ: ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್
ತಾಲೂಕು ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ, ರವಿಗೌಡ ಮಲ್ಲದಗುಡ್ಡ, ಸೇರಿದಂತೆ ಅನೇಕರಿದ್ದರು.
