ಸಿಂಧನೂರು ನ.11

ಈಗಾಗಲೇ ರೈತ ಮುಖಂಡರೆಲ್ಲರೂ ಒಗ್ಗೂಡಿ ಕಳೆದ ಒಂದೂವರೆ ತಿಂಗಳಿನಿಂದ ಪೋತ್ನಾಳ ಹಳ್ಳಕ್ಕೆ ನೀರು ಬಿಡಿ ಎಂದು ಜಿಲ್ಲಾಡಳಿತಕ್ಕೆ ಮತ್ತು ತಾಲೂಕಾಡಳಿತಕ್ಕೆ
ಮನವಿ ಮಾಡುತ್ತಾ ಬಂದರೂ ಸಹ ನಮ್ಮ ಮನವಿಗೆ ಕ್ಯಾರೆ ಎನ್ನುತ್ತಿಲ್ಲ ಈ ಕಾರಣವಾಗಿ ಬಳಗಾನೂರ ಮತ್ತು ರಾಗಲಪರ್ವಿ ಕ್ರಾಸ್ ಬಳಿ ನವೆಂಬರ್ 12 ರಂದು ರಸ್ತೆ ತಡೆ ಚಳುವಳಿ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನ.11 ಬುಧವಾರದಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರು ಬರಗಾಲದಿಂದ ತತ್ತರಿಸಿ ಅವರ ಬದುಕು ಅಸ್ತವ್ಯಸ್ತ ಆಗಿದೆ. ರೈತರು ಯಾರು ಕೂಡ ಎದೆಗುಂದಬೇಡಿ ನಾವು ಧೈರ್ಯವಾಗಿ ಬರಗಾಲವನ್ನು ಎದುರಿಸೋಣ, ಸರ್ಕಾರ,
ಜಿಲ್ಲಾಡಳಿತ, ತಾಲೂಕಾಡಳಿತ, ರೈತರನ್ನು ಕಡೆಗಾಣಿಸಿವೆ.
ಪೋತ್ನಾಳ ಹಳ್ಳಕ್ಕೆ 36 ಗ್ರಾಮಗಳು ಸೇರುತ್ತವೆ, ನೀರು ಬಿಟ್ಟರೆ, ಜನ-ಜಾನುವಾರಗಳು ಬದುಕಿಕೊಳ್ಳಿತ್ತೀವಿ,
ನವೆಂಬರ್ 9ರೊಳಗೆ ಪೋತ್ನಾಳ ಹಳ್ಳಕ್ಕೆ ನೀರು ಬಿಡುತ್ತೀವಿ ಎಂದು ಅಧಿಕಾರಿಗಳು ಹೇಳಿದ್ದರು ಆದರೆ, ನವೆಂಬರ್ 11 ಮತ್ತು 12 ಆದರೂ ಪೋತ್ನಾಳ ಹಳ್ಳಕ್ಕೆ ನೀರು ಬಿಟ್ಟಿಲ್ಲ.

ಪೋತ್ನಾಳ ಹಳ್ಳಕ್ಕೆ ನೀರು ಬಿಡಬೇಕು ಡಿಸೆಂಬರ್ 30ರವರೆಗೆ ಎಡದಂಡೆ ಕಾಲುವೆಗೆ ನೀರು ಕೊಡಬೇಕು ಎಂದು ನಾವು ಎರಡು ಬೇಡಿಕೆಗಳನ್ನು ಇಟ್ಟುಕೊಂಡು ಗುರುವಾರ ನ.12 ರಂದು ರಸ್ತೆ ತಡೆ ನಡೆಸುತ್ತೇವೆ, ಸಾವಿರಾರು ಸಂಖ್ಯೆಯಲ್ಲಿ ರೈತರು ಈ ರಸ್ತೆ ತಡೆಯಲ್ಲಿ ಭಾಗವಹಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ: ರೈತ ಮುಖಂಡರಾದ ಬಸವಲಿಂಗ ತಡಕಲ್, ರಮೇಶ ತಡಕಲ್, ಅಣ್ಣಪ್ಪ ಜಾಲಿಹಾಳ, ದುರುಗಪ್ಪ ತಡಕಲ್, ಶಿವನಗೌಡ ನಿಡಿಗೋಳ, ಶಿವಕುಮಾರ ತಡಕಲ್, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *