ಲಿಂಗಸಗೂರು : ನ 12 –
ತಾಲೂಕಿನ ಗುರುಗುಂಟಾ ಹೋಬಳಿಯ ಗೌಡೂರು ಗ್ರಾಮದ ರೈತರಾದ ಈರಮ್ಮ ಗಂಡ ಆದಪ್ಪ, ಸಿದ್ದಪ್ಪ ತಂದೆ ಗುರುಸಿದ್ದಪ್ಪ ಹಾಗೂ ಬಸವರಾಜ ಕಟ್ಟಿಮನಿ ಇವರು ಹಟ್ಟಿ ಪಟ್ಟಣದ ಶ್ರೀ ಮಲ್ಲಿಕಾರ್ಜುನ ಟ್ರೇಡರ್ಸ್ ರವರ ಕಡೆಯಿಂದ ದಿನಾಂಕ: 24-09-2026ರಂದು ಧನಲಕ್ಷ್ಮೀ ಸೀಡ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ರಾಬಿ ಜೊವಾರ್ ಎಂ 35-1 ಜೋಳದ ಬೀಜಗಳನ್ನು ಖರೀದಿ ಒಟ್ಟು 10 ಎಕರೆ ಜಮೀನಿನಲ್ಲಿ ಬೀತನೆ ಮಾಡಲಾಗಿತ್ತು. ಕಾಲ ಕಾಲಕ್ಕೆ ನೀರು ಹರಿಸಲಾಗಿತ್ತು. ಆದರೆ ಬೀತನೆ ಮಾಡಿದ ಜೋಳ ಒಂದವರೆ ತಿಂಗಳು ಕಳೆದರು ಇನ್ನು ಮೊಳಕೆಯೊಡೆದಿರುವುದಿಲ್ಲ. ಕಳಪೆ ಜೋಳದ ಬೀಜ ವ್ಯಾಪಾರಿಗಳ ಹಾಗೂ ಬೀಜ ಉತ್ಪಾದಕ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಅಧ್ಯಕ್ಷ ದುರ್ಗಾ ಪ್ರಸಾದ್ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿದರು .
1 ಪಾಕೇಟ್ ಜೋಳದ ಬೀಜಕ್ಕೆ 650ರೂ.ಗಳು ಒಟ್ಟು 6500 ಕೊಟ್ಟು 10 ಪಾಕೇಟ್ ಜೋಳದ ಬೀಜಗಳನ್ನು ಖರೀದಿ ಮಾಡಲಾಗಿತ್ತು. ಅಲ್ಲದೇ ಬೀತನೆ, ಗೊಬ್ಬರ ಹಾಗೂ ಕೂಲಿ ಸೇರಿ ಸುಮಾರು 25 ರಿಂದ 30 ಸಾವಿರ ರೂ.ಗಳನ್ನು ಖರ್ಚು ಮಾಡಿಕೊಂಡಿರುವ ರೈತರು ಜೋಳ ಮೊಳಕೆ ಯೊಡೆಯದಿರುವುದರಿಂದ ತುಂಬ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬರಗಾಲದಲ್ಲಿ ಸಾಲ ಸೋಲ ಮಾಡಿ ಬೀತನೆ ಮಾಡಿರುವ ರೈತರು ನಷ್ಟ ಅನುಭವಿಸಿ ಸಾಲ ಕಟ್ಟಲಾರದ ಪರಿಸ್ಥಿತಿಯಲ್ಲಿದ್ದಾರೆ. ಹಟ್ಟಿ, ಗೌಡೂರು ಭಾಗದ ಸುಮಾರು ರೈತರು ಇದೇ ಬೀಜ ಬೀತ್ತನೆ ಮಾಡಿ ಕೈಸುಟ್ಟಿಕೊಂಡಿದ್ದಾರೆ.
ಶ್ರೀ ಮಲ್ಲಿಕಾರ್ಜುನ ಟ್ರೇಡರ್ಸ್ ಒಂದೇ ಪರವಾನಿಗೆಯಲ್ಲಿ ಹಟ್ಟಿ ಮತ್ತು ಮೇದಿನಾಪೂರು ಗ್ರಾಮದಲ್ಲಿ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಏನು ತಿಳಿಯದ ರೈತರು ಇವರ ವಂಚನೆ ಜಾಲಕ್ಕೆ ಬಲಿಯಾಗಿ ನಷ್ಟ ಅನುಭವಿಸಿ ಆತ್ಮಹತ್ಯೆಯ ದಾರಿ ಹಿಡಿಯುವಂತೆ ಮಾಡುತ್ತಿದ್ದಾರೆ.ಕಳಪೆ ಬೀತನೆ ಬೀಜ ಮಾರಾಟ ಸದರಿ ಟ್ರೇಡರ ಹಾಗೂ ಧನಲಕ್ಷ್ಮೀ ಸೀಡ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನಷ್ಟ ಪರಿಹಾರ ನೀಡಬೇಕು ಇಲ್ಲವಾದಲ್ಲಿ ತಮ್ಮ ಕಾರ್ಯಾಲಯದ ಮುಂದೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಒತ್ತಾಯಿಸಿದರು .ಈ ಸಂದರ್ಭದಲ್ಲಿ
ಬಸವರಾಜ ಅಂಗಡಿ ತಾ.ಪ್ರ.ಕಾರ್ಯದರ್ಶಿ ,
ದುರುಗಪ್ಪ ಗೌಡೂರುಗ್ರಾ.ಘ.ಅಧ್ಯಕ್ಷರು ,
ರಮೇಶ ಗೌಡೂರು ತಾ.ಕಾರ್ಯದರ್ಶಿ ಸೇರಿದಂತೆ ಇತರರು ಇದ್ದರು .
