ಹಾಲಾಪೂರ*: ಸಮೀಪದ ತೋರಣದಿನ್ನಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೊತೆಗೆ ಗೆಳೆಯರ ಬಳಗದಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದು ವಿನಾಯಕ ಗೆಳೆಯರ ಬಳಗದ ಸದಸ್ಯರು ಪತ್ರಿಕೆಯೊಂದಿಗೆ ಮಾತನಾಡಿ, ಇದೇ ತಿಂಗಳು ನವಂಬರ್ 14 ರಂದು, ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಉದ್ಘಾಟನಾ ಪಂದ್ಯ ಪ್ರಾರಂಭವಾಗುವುದು, ಅದಕ್ಕಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಸುತ್ತಮುತ್ತಲಿನ ಗ್ರಾಮಗಳು, ತಾಲೂಕ, ಬೇರೆ ಜಿಲ್ಲೆಗಳಿಂದ ಕಬ್ಬಡಿ ಆಸಕ್ತ ತಂಡಗಳು ಭಾಗವಹಿಸಿ, ಗ್ರಾಮೀಣ ಭಾಗದ ಜೀವಂತ ಕ್ರೀಡೆಯಾದ ಕಬ್ಬಡಿ ಟೂರ್ನಮೆಂಟ್ ಪ್ರತಿಯೊಬ್ಬರು ಉಳಿಸುವ ಬೆಳೆಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು, ಪಂದ್ಯಾವಳಿಗೆ ಆಗಮಿಸುವ ಪ್ರತಿಯೊಂದು ತಂಡಕ್ಕೂ ವಿಶೇಷ ಕಾಳಜಿ ವಹಿಸಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು, ಹಾಗೆ ಈ ಒಂದು ಪಂದ್ಯಾವಳಿಗಳಿಗೆ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಅನೇಕ ಸಹಾಯ ಸಹಕಾರ ನೀಡಿದ್ದಾರೆ ಎಂದು ತೋರಣದಿನ್ನಿ ಗೆಳೆಯರ ಬಳಗದ ಸದಸ್ಯರು ಪತ್ರಿಕೆಯೊಂದಿಗೆ ಮಾತನಾಡಿದರು

Leave a Reply

Your email address will not be published. Required fields are marked *