ಕಂಪ್ಲಿ: ತಾಲ್ಲೂಕಿನ ಕಣವಿತಿಮ್ಮಲಾಪುರ ಗ್ರಾಮದ ಸಮಾಜ ಸೇವಕ ಜಗದೀಶ್ ಪೂಜಾರ್ ಅವರು ಧಾರವಾಡದ ನಾಟ್ಯ ಸ್ಪೂರ್ತಿ ಆರ್ಟ್ ಅಂಡ್ ಕಲ್ಚರ್ ಸಂಸ್ಥೆ ನೀಡುವ ‘ಕರುನಾಡ ಸಾಧನಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಗದೀಶ್ ಪೂಜಾರ್ ಅವರ ಸುದೀರ್ಘ ಸಮಾಜ ಸೇವೆಯ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 15ರಂದು ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಸದಾನಂದ ಸ.ವ. ಬಂಗೆಣ್ಣನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *